Asian Games: ಏಷ್ಯನ್ ಗೇಮ್ಸ್​​ ಮಹಿಳೆಯರ ಕ್ರಿಕೆಟ್ ಸೆಮಿಫೈನಲ್​​ನಲ್ಲಿ ಭಾರತದ ಎದುರಾಳಿ ಯಾರು? ಪಂದ್ಯ ಯಾವಾಗ ನಡೆಯಲಿದೆ? | ಕ್ರೀಡಾ ಸುದ್ದಿ | ACTPnews

Asian Games: ಏಷ್ಯನ್ ಗೇಮ್ಸ್​​ ಮಹಿಳೆಯರ ಕ್ರಿಕೆಟ್ ಸೆಮಿಫೈನಲ್​​ನಲ್ಲಿ ಭಾರತದ ಎದುರಾಳಿ ಯಾರು? ಪಂದ್ಯ ಯಾವಾಗ ನಡೆಯಲಿದೆ? | ಕ್ರೀಡಾ ಸುದ್ದಿ


ಈ ಎರಡು ತಂಡಗಳ ನಡುವಿನ ಈ ಹೈ-ವೋಲ್ಟೇಜ್ ಸೆಮಿಫೈನಲ್ ಪಂದ್ಯವು ಭಾನುವಾರ ಭಾರತೀಯ ಕಾಲಮಾನ ಬೆಳಗ್ಗೆ 10:30 ಕ್ಕೆ ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಎರಡೂ ತಂಡಗಳ ಹೆಡ್​ ಟು ಹೆಡ್ ದಾಖಲೆಗಳ ಬಗ್ಗೆ ಒಮ್ಮೆ ಕಣ್ಣಾಯಿಸೋಣ.

ಏಷ್ಯನ್ ಗೇಮ್ಸ್ ಪ್ರದರ್ಶನ

ಭಾರತ ಮಹಿಳಾ ತಂಡ ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್ ತಂಡವನ್ನು 8 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತ್ತು. ಜಪಾನ್ ನೀಡಿದ್ದ 58 ರನ್ಗಳ ಸಣ್ಣ ಗುರಿಯನ್ನು ಕೇವಲ 5 ಓವರ್‌ಗಳಲ್ಲಿ ಬೆನ್ನಟ್ಟಿ ಗೆಲುವು ಸಾಧಿಸಿತ್ತು. ಈ ಗೆಲುವಿನ ಉತ್ಸಾಹದಲ್ಲಿರುವ ಭಾರತ ತಂಡದ ಆಟಗಾರ್ತಿಯರು ಮತ್ತೊಮ್ಮೆ ಗೋಲ್ಡ್ ಮೆಡಲ್ ಮೇಲೆ ಕಣ್ಣಿಟ್ಟಿದ್ದಾರೆ.

ಅತ್ತ ಬಾಂಗ್ಲಾದೇಶ ತಂಡ ಚೀನಾ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದರಿಂದ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಐಸಿಸಿ (ICC) ರ‍್ಯಾಂಕಿಂಗ್‌ನಲ್ಲಿ ಚೀನಾಕ್ಕಿಂತ ಉತ್ತಮ ಸ್ಥಾನದಲ್ಲಿದ್ದ ಕಾರಣ ಬಾಂಗ್ಲಾದೇಶ ತಂಡ ಪಂದ್ಯ ಆಡದಿದ್ದರೂ ನೇರವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ.

 ಮುಖಾಮುಖಿಯಲ್ಲಿ ಭಾರತದ ಸಂಪೂರ್ಣ ಪ್ರಾಬಲ್ಯ

ಟಿ20 ಇಂಟರ್ನ್ಯಾಷನಲ್ ಇತಿಹಾಸದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಸ್ಪಷ್ಟ ಪ್ರಾಬಲ್ಯ ಹೊಂದಿದೆ. ಉಭಯ ತಂಡಗಳ ನಡುವೆ ನಡೆದ 25 ಪಂದ್ಯಗಳಲ್ಲಿ ಭಾರತ 22 ರಲ್ಲಿ ಗೆದ್ದಿದೆ. ಬಾಂಗ್ಲಾದೇಶ ಕೊನೆಯದಾಗಿ 3 ವರ್ಷಗಳ ಹಿಂದೆ (2023 ರಲ್ಲಿ) ಭಾರತವನ್ನು ಸೋಲಿಸಿತ್ತು. ಅದಾದ ನಂತರ ಭಾರತವು ಬಾಂಗ್ಲಾದೇಶ ವಿರುದ್ಧ ಸತತ 9 ಪಂದ್ಯಗಳನ್ನು ಗೆದ್ದುಕೊಂಡಿದೆ. ಇತ್ತೀಚೆಗೆ ನಡೆದ ಏಷ್ಯಾ ಕಪ್ ಸೆಮಿಫೈನಲ್‌ನಲ್ಲೂ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ 40 ರನ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತ್ತು.

ಪಿಚ್ ಮತ್ತು ತಂಡಗಳ ಬಲ

ಪಿಚ್‌ನಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಸಿಗುತ್ತಿದ್ದು, ಜಪಾನ್ ವಿರುದ್ಧ ಎಡಗೈ ಸ್ಪಿನ್ನರ್ ಶ್ರೀ ಚರಣಿ ಮಾರಕ ಬೌಲಿಂಗ್ ಮಾಡಿದ್ದರು. ಅವರಿಗೆ ಶಫಾಲಿ ವರ್ಮಾ, ದೀಪ್ತಿ ಶರ್ಮಾ ಮತ್ತು ಗಾಯದಿಂದ ಚೇತರಿಸಿಕೊಂಡು 3 ತಿಂಗಳ ನಂತರ ತಂಡಕ್ಕೆ ಮರಳಿರುವ ಶ್ರೇಯಾಂಕಾ ಪಾಟೀಲ್ ಉತ್ತಮ ಸಾಥ್ ನೀಡಿದ್ದಾರೆ. ಮತ್ತೊಂದೆಡೆ, ಬಾಂಗ್ಲಾದೇಶ ತಂಡವು ಭಾರತದ ಬಲಿಷ್ಠ ಬ್ಯಾಟಿಂಗ್ ಲೈನ್-ಅಪ್ ಅನ್ನು ಕಟ್ಟಿಹಾಕಲು ತನ್ನ ಸ್ಪಿನ್ನರ್‌ಗಳಾದ ನಾಹಿದಾ ಅಖ್ತರ್ ಮತ್ತು ರಾಬೇಯಾ ಖಾನ್ ಅವರನ್ನೇ ನೆಚ್ಚಿಕೊಂಡಿದೆ.

ಬ್ಯಾಟಿಂಗ್ ಬಲ

ಜಪಾನ್ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಅವರೊಬ್ಬರೇ ಪಂದ್ಯವನ್ನು ಮುಗಿಸಿದ್ದರಿಂದ, ಉಪನಾಯಕಿ ಸ್ಮೃತಿ ಮಂಧಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ದೊಡ್ಡ ಸೆಮಿಫೈನಲ್ ಪಂದ್ಯದಲ್ಲಿ ಇವರಿಬ್ಬರೂ ಕಣಕ್ಕಿಳಿದು ರನ್ ಗಳಿಸುವ ದೊಡ್ಡ ನಿರೀಕ್ಷೆಯಿದೆ. ಭಾರತ ತಂಡವು ಯಾವುದೇ ರೀತಿಯ ಅತಿಯಾದ ಆತ್ಮವಿಶ್ವಾಸಕ್ಕೆ (Overconfidence) ಒಳಗಾಗದೆ ಜಾಗರೂಕತೆಯಿಂದ ಆಡಲು ಬಯಸಿದೆ.

ತಂಡಗಳ ವಿವರ

ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಜಿ. ಕಮಲಿನಿ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ಭಾರತಿ ಫುಲ್‌ಮಾಲಿ, ಶ್ರೀ ಚರಣಿ, ರೇಣುಕಾ ಠಾಕೂರ್, ಕ್ರಾಂತಿ ಗೌಡ್, ಅರುಂಧತಿ ರೆಡ್ಡಿ, ರಾಧಾ ಯಾದವ್, ನಂದಿನಿ ಶರ್ಮಾ.

ಬಾಂಗ್ಲಾದೇಶ ತಂಡ: ನಿಗಾರ್ ಸುಲ್ತಾನಾ (ನಾಯಕಿ), ನಾಹಿದಾ ಅಖ್ತರ್ (ಉಪನಾಯಕಿ), ದಿಲಾರಾ ಅಖ್ತರ್, ಫಹೀಮಾ ಖಾತುನ್, ಫರಿಹಾ ತ್ರಿಶ್ನಾ, ಜುವಾಯ್ರಿಯಾ ಫೆರ್ದೋಸ್, ಮಾರುಫಾ ಅಖ್ತರ್, ಶೋಭನಾ ಮೋಸ್ತಾರಿ, ರಾಬೇಯಾ ಖಾನ್, ರಿತು ಮೋನಿ, ಸಂಜೀದಾ ಅಖ್ತರ್ ಮೇಘ್ಲಾ, ಶರ್ಮಿನ್ ಸುಲ್ತಾನಾ, ಶಾರ್ಮಿನ್ ಅಖ್ತರ್, ಶೋರ್ನಾ ಅಖ್ತರ್, ಸುಲ್ತಾನಾ ಖಾತುನ್.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed