Last Updated:
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೊಂದು ಅಕ್ರಮ ಬಯಲಾಗಿದೆ. ರೇಣುಕಾಸ್ವಾಮಿ ಕೊಲೆ ಆರೋಪಿ ಪ್ರದೋಷ್ ವಿರುದ್ಧ ದೂರು ದಾಖಲಾಗಿದೆ.
ಬೆಂಗಳೂರು: ಕಳೆದ ಕೆಲ ತಿಂಗಳ ಹಿಂದಷ್ಟೇ ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿರುವ ಅಪರಾಧಿ ಪ್ರಜ್ವಲ್ ರೇವಣ್ಣ (Prajwal Revanna) ಸೆಲ್ನಲ್ಲಿ ಮೊಬೈಲ್ (Mobile) ಪತ್ತೆಯಾಗಿತ್ತು. ಈ ವಿಚಾರ ಕೇವಲ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಸದ್ದು ಮಾಡಿತ್ತು. ಈ ಬೆನ್ನಲ್ಲೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೊಂದು ಅಕ್ರಮ ಬಯಲಾಗಿದೆ. ರೇಣುಕಾಸ್ವಾಮಿ ಕೊಲೆ ಆರೋಪಿ ಪ್ರದೋಷ್ (Pradosh) ವಿರುದ್ಧ ದೂರು ದಾಖಲಾಗಿದೆ.
ಪ್ರದೋಷ್ಗೆ ಮೌನೇಶ್ ಹೆಚ್ ಎಂಬ ಜೈಲು ಸಿಬ್ಬಂದಿ ಸಹಾಯ ಮಾಡಿರೋದು ಪತ್ತೆಯಾಗಿದೆ. ಮೊದಲು ಪ್ರದೋಷ್ ಮೂರು ಜನ ವಕೀಲರ ಫೋನ್ ನಂಬರ್ಗಳನ್ನು ನೊಂದಾಯಿಸಿಕೊಂಡಿದ್ದರು. ಹೀಗಾಗಿ ಪತ್ನಿಯ ಜೊತೆ ಮಾತನಾಡಲು ಆಗ್ತಿರಲಿಲ್ಲ, ಇದರಿಂದ ಸಿಬ್ಬಂದಿ ಸಹಾಯದಿಂದ ಬೇರೊಬ್ಬ ಕೈದಿಯ ಸವಲತ್ತು ಬಳಕೆ ಮಾಡಿಕೊಂಡು ನಿಯಮ ಮೀರಿ ಪತ್ನಿಗೆ ಕರೆ ಮಾಡಿದ್ದಾರೆ ಎನ್ನಲಾಗಿದೆ.
ಬೇರೊಬ್ಬ ಕೈದಿಯ ಮೂಲಕ ಸಂತೋಷ್ ಎಂಬ ಹೆಸರಲ್ಲಿ ಪತ್ನಿ ನಂಬರ್ ಉಲ್ಲೇಖಿಸಿದ್ದ ಪ್ರದೋಷ್ ಪತ್ನಿಗೆ ಕರೆ ಮಾಡಿ ಮಾತನಾಡಿದ್ದಾರೆ. ಬೇರೊಬ್ಬ ಕೈದಿಯ ಸವಲತ್ತಿನ ಮೂಲಕ ಪತ್ನಿ ಜೊತೆ ಪ್ರದೋಷ್ ಮಾತುಕತೆ ನಡೆಸಿದ್ದು, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆ ಪರಪ್ಪನ ಅಗ್ರಹಾರ ಪೊಲೀಸರಿಗೆ ದೂರು ನೀಡಲಾಗಿದೆ. ಜೈಲಾಧಿಕಾರಿಗಳಿಂದ ಪರಪ್ಪನ ಅಗ್ರಹಾರ ಇನ್ಸ್ಪೆಕ್ಟರ್ಗಳಿಗೆ ದೂರು ನೀಡಲಾಗಿದ್ದು, ಪ್ರದೋಷ್ ಹಾಗೂ ಸಹಾಯ ಮಾಡಿದ ಜೈಲು ಸಿಬ್ಬಂದಿ ಮೌನೇಶ್ ವಿರುದ್ಧ ಕ್ರಮಕ್ಕೆ ಮನವಿ ಮಾಡಲಾಗಿದೆ.
(ವರದಿ: ಮಾದೇಶ್, ನ್ಯೂಸ್18 ಕನ್ನಡ, ಬೆಂಗಳೂರು)














