Bigg Boss 13: ಬಿಗ್ ಬಾಸ್​​ನಿಂದ ಅರ್ಧಕ್ಕೆ ಹೊರಬಂದ ಓಂ ಪ್ರಕಾಶ್ ರಾವ್! ಆರೋಗ್ಯದ ಬಗ್ಗೆ ಹೇಳಿದ್ದೇನು? | | ACTPnews

ಓಂ ಪ್ರಕಾಶ್​ ರಾವ್​


Last Updated:

ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುವ ಬಿಗ್ ಬಾಸ್ ಸೀಸನ್ 13ರ ಸ್ಪರ್ಧಿ ಮಾತನಾಡಿದ್ದು, ತಮ್ಮ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ.

ಓಂ ಪ್ರಕಾಶ್​ ರಾವ್​
ಓಂ ಪ್ರಕಾಶ್​ ರಾವ್​

ಬಾಸ್ ಸೀಸನ್ -13 (Bigg Boss-13) ರಿಂದ ಓಂ ಪ್ರಕಾಶ್ ರಾವ್ (OM Prakash Rao) ಹೊರಗೆ ಬಂದಿದ್ದಾರೆ. ಅನಾರೋಗ್ಯ ಹಿನ್ನೆಲೆ ಓಂ ಪ್ರಕಾಶ್​ ರಾವ್​ ಅವರು ತಮ್ಮ ಬಿಗ್​ ಬಾಸ್​ ಜರ್ನಿಯನ್ನು ಅಂತ್ಯಗೊಳಿಸಿದ್ದಾರೆ. ಈ ಬಗ್ಗೆ ಲರ್ಸ್​ ಕನ್ನಡ ಅಧಿಕೃತವಾಗಿ ಮಾಹಿತಿ ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡಿದ ಕಲರ್ಸ್​ ಕನ್ನಡ, ಓಂ ಪ್ರಕಾಶ್​ ರಾವ್​ DISCONTINUED ಅಂತ ಪೋಸ್ಟರ್ ರಿಲೀಸ್ ಮಾಡಿದೆ.

ನಿನ್ನೆ ಓಂ ಪ್ರಕಾಶ್​ ರಾವ್​ ಅವರ ಅನಾರೋಗ್ಯ ಹದಗೆಟ್ಟಿತ್ತು. ಕಾಲು ನೋವು ಹೆಚ್ಚಾದ ಹಿನ್ನೆಲೆಯಲ್ಲಿ ಅವರನ್ನು ಬಿಡದಿಯ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ನಂತರ ಓಂ ಪ್ರಕಾಶ್​ ರಾವ್​ ಅವರು ವಾಪಸ್ ಬಿಗ್​ ಬಾಸ್​​ ಮನೆಗೆ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ, ಓಂ ಪ್ರಕಾಶ್​ ಅವರಿಗೆ ತೀವ್ರ ಅನಾರೋಗ್ಯ ಸಮಸ್ಯೆ ಹಿನ್ನೆಲೆ ತಮ್ಮ ಜರ್ನಿಯನ್ನು ಅಂತ್ಯಗೊಳಿಸಿದ್ದಾರೆ.
ಓಂ ಪ್ರಕಾಶ್​ ರಾವ್​ ಹೇಳಿದ್ದೇನು?

ಇನ್ನು, ಬಿಗ್​​ ಬಾಸ್​ ಮನೆಯಿಂದ ಆಚೆ ಬಂದಿರುವ ಬಿಗ್​ ಬಾಸ್​ ಸೀಸನ್​ 13ರ ಸ್ಪರ್ಧಿ ಮಾತನಾಡಿದ್ದು, ತಮ್ಮ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ. ಬಿಗ್​ ಮನೆಯ ಫುಡ್​ ಅಡ್ಜಸ್ಟ್​ ಆಗಲಿಲ್ಲ. ಸ್ವಲ್ಪ ತೊಂದರೆಯಾಯಿತು. ಅನ್ನವನ್ನು ನಾನು ಜಾಸ್ತಿ ತಿನ್ನುವ ಹಾಗಿಲ್ಲ. ಶುಗರ್​ ಮತ್ತು ಬಿಪಿ ಜಾಸ್ತಿಯಾಗಿತ್ತು. ಈ ಹಿನ್ನೆಲೆ ಬಿಗ್​ ಬಾಸ್​ ಮನಯಿಂದ ಹೊರಗಡೆ ಬಂದೆ ಎಂದು ಹೇಳಿದರು.

ಸದ್ಯ, ಫ್ಯಾಮಿಲಿ ಡಾಕ್ಟರ್​ ಚೆಕ್​ ಮಾಡಿ ರಿಪೋರ್ಟ್ಸ್​​ಗಳನ್ನು ನೋಡಿ 15 ದಿನಗಳ ಕಾಲ ರೆಸ್ಟ್​ ಮಾಡಿ ಎಂದು ಹೇಳಿದ್ದಾರೆ. ಜನರಿಗಾಗಿ ನಾನು ಬಿಗ್​ ಬಾಸ್​ ಮನಗೆ ಹೋಗಿದ್ದೆ. ನಿಮ್ಮನ್ನ ರಂಜಿಸಬೇಕು ಅಂತಾ ಪ್ರಯತ್ನ ಪಟ್ಟಿದೆ. ಆದ್ರೆ, ಈ ಆರೋಗ್ಯ ಹದಗೆಟ್ಟ ಹಿನ್ನೆಲೆ ಹೊರಗಡೆ ಬಂದೆ. ದಯವಿಟ್ಟು ಕ್ಷಮಿಸಿ. ಬಿಗ್​ ಬಾಸ್​ ಮನೆಯಲ್ಲಿರುವ ಎಲ್ಲರನ್ನೂ ಮಿಸ್​ ಮಾಡ್ಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ಚೇತರಿಸಿಕೊಂಡು ಹೊರಗಡೆ ಬರ್ತಿನಿ, ಬೇಗ ಗುಣಮುಖನಾಗಿ ಕೆಲಸಗಳನ್ನು ಶುರುಮಾಡುತ್ತೇನೆ ಎಂದು ಓಂ ಪ್ರಕಾಶ್​ ರಾವ್​ ಅವರು ತಿಳಿಸಿದ್ರು.

(ವರದಿ: ಗೀತಾ, ನ್ಯೂಸ್​18 ಕನ್ನಡ, ಬೆಂಗಳೂರು)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed