Imran Khan: ಅತ್ತ ಜೈಲಿನಲ್ಲಿ ಇಮ್ರಾನ್ ಖಾನ್, ಇತ್ತ ಎರಡನೇ ಮದುವೆಯಾದ ಮಾಜಿ ಪತ್ನಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಇಮ್ರಾನ್ ಖಾನ್ ಹಾಗೂ ಮಾಜಿ ಪತ್ನಿ ಜೆಮಿಮಾ


Last Updated:

ಇಮ್ರಾನ್ ಖಾನ್ ಜೈಲಿನಲ್ಲಿರುವಾಗ, ಅವರ ಮಾಜಿ ಪತ್ನಿ ಜೆಮಿಮಾ ಗೋಲ್ಡ್ ಸ್ಮಿತ್ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರವೇಶಿಸಿದ್ದಾರೆ. 52 ವರ್ಷದ ಜೆಮಿಮಾ 62 ವರ್ಷದ ಐರಿಶ್-ಆಸ್ಟ್ರೇಲಿಯನ್ ಫೈನಾನ್ಶಿಯರ್ ಕ್ಯಾಮರೂನ್ ಒ’ರೈಲಿ ಅವರನ್ನು ಮದುವೆಯಾಗಿದ್ದಾರೆ. ಡೈಲಿ ಮೇಲ್ ಪ್ರಕಾರ, ದಂಪತಿ ವಾರಾಂತ್ಯದಲ್ಲಿ ವಿವಾಹವಾದರು.

ಇಮ್ರಾನ್ ಖಾನ್ ಹಾಗೂ ಮಾಜಿ ಪತ್ನಿ ಜೆಮಿಮಾ
ಇಮ್ರಾನ್ ಖಾನ್ ಹಾಗೂ ಮಾಜಿ ಪತ್ನಿ ಜೆಮಿಮಾ

ಇಸ್ಲಮಾಬಾದ್(ಸೆ.15): ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಕ್ರಿಕೆಟಿಗ ಇಮ್ರಾನ್ ಖಾನ್ ಜೈಲಿನಲ್ಲಿರುವಾಗ, ಅವರ ಮಾಜಿ ಪತ್ನಿ ಜೆಮಿಮಾ ಗೋಲ್ಡ್ ಸ್ಮಿತ್ ತಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರವೇಶಿಸಿದ್ದಾರೆ. 52 ವರ್ಷದ ಜೆಮಿಮಾ 62 ವರ್ಷದ ಐರಿಶ್-ಆಸ್ಟ್ರೇಲಿಯನ್ ಫೈನಾನ್ಶಿಯರ್ ಕ್ಯಾಮರೂನ್ ಒ’ರೈಲಿ ಅವರನ್ನು ಮದುವೆಯಾಗಿದ್ದಾರೆ. ಡೈಲಿ ಮೇಲ್ ಪ್ರಕಾರ, ದಂಪತಿ ವಾರಾಂತ್ಯದಲ್ಲಿ ವಿವಾಹವಾದರು. ಜೆಮಿಮಾ ಅವರ ಸಹೋದರ ಬೆನ್ ಗೋಲ್ಡ್ ಸ್ಮಿತ್ ಕೂಡ ಮದುವೆ ಆಗಿರುವ ವಿಚಾರವನ್ನು ದೃಢಪಡಿಸಿದರು. ಜೆಮಿಮಾ ಮತ್ತು ಇಮ್ರಾನ್ ಖಾನ್ ಸುಮಾರು ಒಂಬತ್ತು ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಅವರ ಸಂಬಂಧವು 2004 ರಲ್ಲಿ ಕೊನೆಗೊಂಡಿತು, ಆದಾಗ್ಯೂ ಕೆಲವು ದಾಖಲೆಗಳು 2005 ರಲ್ಲಿ ವಿಚ್ಛೇದನ ಆಗಿದೆ ಎಂದು ಹೇಳುತ್ತವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed