Last Updated:
Bigg Boss Kavya Shaiva: ಕಾವ್ಯ ಶೈವ ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದ ಕಾರ್ಯಕ್ರಮದಲ್ಲಿ ಅಭಿಮಾನಿ ಮೈಕ್ ಕಸಿದುಕೊಳ್ಳಲು ಯತ್ನಿಸಿದ ಘಟನೆ ಬಳಿಕ ಮುಜುಗರದಿಂದ ವೇದಿಕೆ ತೊರೆದು ಹೋದರು, ಭದ್ರತೆ ಕೊರತೆ ಆರೋಪ
ಬಿಗ್ ಬಾಸ್ (Bigg Boss) ಮೂಲಕ ಕರ್ನಾಟಕ ಜನತೆಯ ಮನಗೆದ್ದಿರುವ ನಟಿ ಕಾವ್ಯ ಶೈವ (Actress Kavya Shaiva) ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ ಬಳಿಕ ನಟಿ ಅನೇಕ ಕಾರ್ಯಕ್ರಮಗಳಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಆದ್ರೆ ಇತ್ತೀಚಿಗೆ ಕಾರ್ಯಕ್ರಮ ಒಂದರಲ್ಲಿ ಸಂಭವಿಸಿದ ಘಟನೆ ನಟಿ ಕಾವ್ಯ ಅವರಿಗೆ ಮಾತ್ರವಲ್ಲ, ಅವರ ಅಭಿಮಾನಿಗಳಿಗೆಲೂ ಬೇಸರ ತಂದಿದೆ. ವೇದಿಕೆಯ ಮೇಲೆಯೇ ನಡೆದ ಈ ಅವಮಾನಕಾರಿ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಟಿ ಕಾವ್ಯ ಶೈವ ಅವರುಬಿಗ್ ಬಾಸ್ ಕನ್ನಡ ಸೀಸನ್ 12 ಮೂಲಕ ಮನೆಮಾತಾಗಿದ್ದು, ಫೈನಲ್ ಹಂತವರೆಗೆ ತಲುಪಿದವರು. ಆ ಬಳಿಕ ಅವರ ಜನಪ್ರೀಯತೆ ಹೆಚ್ಚುತ್ತಲೇ ಹೋಯ್ತು. ಹೀಗಾಗಿ ಅನೇಕ ಸಭೆ, ಸಮಾರಂಭ, ಜಾತ್ರೆಗಳು, ಕಾರ್ಯಕ್ರಮ ಉದ್ಘಾಟನೆಗಳು, ಬ್ರ್ಯಾಂಡ್ ಪ್ರೋಮೋಷನ್ಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬ್ಯುಸಿಗಿದ್ದಾರೆ.
ಹೀಗಿರುವಾಗ ಇತ್ತೀಚೆಗೆ ಕಲಬುರಗಿಯ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ನಡೆಯುತ್ತಿದ್ದ ವಿಶೇಷ ಕಾರ್ಯಕ್ರಮಕ್ಕೆ ಕಾವ್ಯ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದ ಈ ಕಾರ್ಯಕ್ರಮ ಶಾಂತಿಯುತವಾಗಿ ಸಾಗುತ್ತಿತ್ತು. ಇನ್ನೇನು ಕಾವ್ಯ ವೇದಿಕೆಯ ಮೇಲೆ ಮಾತನಾಡಲು ಶುರು ಮಾಡುತಿದ್ದ ವೇಳೆ ಘಟನೆಯೊಂದು ನಡೆದುಹೋಗಿದೆ.
ಈ ಘಟನೆಯ ನಂತರ ಅಭಿಮಾನಿಗಳು ಮತ್ತು ಆಯೋಜಕರ ನಡುವೆ ವಾಗ್ವಾದ ತೀವ್ರಗೊಂಡಿದ್ದು, ಪರಿಸ್ಥಿತಿ ಗದ್ದಲದ ಹಂತಕ್ಕೆ ತಲುಪಿತು. ಈ ಸಮಯದಲ್ಲಿ ಕಾವ್ಯ ಅವರು ಬೇಸರದಿಂದ ಕಾರ್ಯಕ್ರಮವನ್ನು ಮಧ್ಯದಲ್ಲಿ ಬಿಟ್ಟು ಹೊರಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕಾವ್ಯ ಅಭಿಮಾನಿಗಳು ಆಯೋಜಕರ ಮೇಲೆಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭದ್ರತಾ ವ್ಯವಸ್ಥೆಯ ಕೊರತೆಯೇ ಎಲ್ಲಾ ಗದ್ದಲಕ್ಕೆ ಕಾರಣವೆಂದು ಅಭಿಮಾನಿಗಳು ಆರೋಪಿಸುತ್ತಿದ್ದಾರೆ.
ಇನ್ನು ನಟಿ ಕಾವ್ಯ ಶೈವ ಅವರು ಬಿಗ್ ಬಾಸ್ ಗೆ ಬರುವ ಮೊದಲು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಸುಮನಾ ಪಾತ್ರದ ಮೂಲಕ ಬಹಳಷ್ಟು ಜನಪ್ರೀಯತೆ ಪಡೆದುಕೊಂಡಿದ್ದರು. ಮೂಲತಃ ಕೆ.ಆರ್. ಪೇಟೆಯವರಾದ ಅವರು ಮೈಸೂರಿನಲ್ಲಿ ಶಿಕ್ಷಣ ಮುಗಿಸಿ ನಟನೆಯತ್ತ ಹೆಜ್ಜೆ ಇಟ್ಟರು.
ಈ ಘಟನೆಯ ಬಗ್ಗೆ ಕಾವ್ಯ ಶೈವ ಅವರು ಇನ್ನೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮುಂದಿನ ಕಾರ್ಯಕ್ರಮಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕಿದೆ ಎಂಬ ಅಭಿಮಾನಿಗಳ ಮತ್ತು ಸಾರ್ವಜನಿಕರ ಒತ್ತಾಯ ಹೆಚ್ಚಾಗಿದೆ.
Bangalore [Bangalore],Bangalore,Karnataka













