Last Updated:
ಮಕ್ಕಿಗದ್ದೆಯ ನಾಗರಾಜ ಹೆಗಡೆ, ವಿರಾಟ್ ಕೊಹ್ಲಿ ಜೊತೆ Oakley Meta Sunglasses ಅಂತರಾಷ್ಟ್ರೀಯ ಜಾಹೀರಾತಿನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ, ಕರ್ನಾಟಕ ತಂಡದಲ್ಲಿ ಆಡೋದು ತಮ್ಮ ಗುರಿ ಎಂದು ಹೇಳಿದ್ದಾರೆ
ಮಲೆನಾಡಿನ ಸಣ್ಣ ಊರಿನಿಂದ ಹೊರಟ ಒಬ್ಬ ಯುವಕ, ಕೋಟಿ ಮಂದಿ ಕನಸು ಕಾಣುವ ಜಾಗದಲ್ಲಿ ನಿಂತಿದ್ದಾನೆ! ಸಾಕ್ಷಾತ್ ವಿರಾಟ್ ಕೊಹ್ಲಿ (Virat Kohli) ಅವರ ಪಕ್ಕದಲ್ಲಿ! ಹೌದು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮಕ್ಕಿಗದ್ದೆ ಮೂಲದ, ಪ್ರಸ್ತುತ ಸಿದ್ದಾಪುರದ (Siddapura) ವಿದ್ಯಾಗಿರಿಯಲ್ಲಿ ವಾಸವಿರುವ ನಾಗರಾಜ ಹೆಗಡೆ ಎಂಬ ಯುವ ಪ್ರತಿಭೆ, ವಿಶ್ವಪ್ರಸಿದ್ಧ ‘ಓಕ್ಲಿ ಮೆಟಾ ಸನ್ ಗ್ಲಾಸ್’ (Oakley Meta Sunglasses) ಅಂತರಾಷ್ಟ್ರೀಯ ಜಾಹೀರಾತಿನಲ್ಲಿ (Advertisement) ಕಿಂಗ್ ಕೊಹ್ಲಿ ಜೊತೆ ಸ್ಕ್ರೀನ್ ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಖ್ಯಾತ ಶಿಕ್ಷಕ ದಂಪತಿಗಳಾದ ತಂದೆ ಜಿ.ಜಿ. ಹೆಗಡೆ ಮತ್ತು ತಾಯಿ ರೂಪಾ ಹೆಬ್ಬಾರ ಅವರ ಪುತ್ರನಾಗಿ ಹುಟ್ಟಿ, ಬಾಲ್ಯದಿಂದಲೇ ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ನಾಗರಾಜ, ಸಿದ್ದಾಪುರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದರು. ನಂತರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಪದವಿ ಹಾಗೂ ಜೈನ್ ಕಾಲೇಜಿನಲ್ಲಿ MBA ಪೂರೈಸಿದ ಈ ಯುವಕ, ಕೇವಲ ಓದಿಗೆ ಮಾತ್ರ ಸೀಮಿತವಾಗದೆ ಕ್ರಿಕೆಟ್, ವಾಲಿಬಾಲ್ ಮತ್ತು ಬ್ಯಾಡ್ಮಿಂಟನ್ ಮೂರೂ ಕ್ರೀಡೆಗಳಲ್ಲಿ ಗುರುತಿಸಿಕೊಂಡರು.
ಮಕ್ಕಿಗದ್ದೆ ಮಣ್ಣಿಂದ ಮೇರು ಆಟಗಾರನ ಗರಡಿವರೆಗೆ!
Bangalore [Bangalore],Bangalore,Karnataka
May 07, 2026 10:52 AM IST
Achievement: ಕೊಹ್ಲಿ ಪಕ್ಕ ಮಲೆನಾಡ ಕನ್ನಡಿಗ; ವಿರಾಟ್ಗೆ ಖಡಕ್ ಬೌಲಿಂಗ್ ಮಾಡಿದ ಈ ಹುಡುಗ ಯಾರು ಗೊತ್ತಾ? ಕುಗ್ರಾಮದಿಂದ ಕಿಂಗ್ ಕೊಹ್ಲಿವರೆಗೆ!














