IND vs WI: ವೆಸ್ಟ್​ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಅಯ್ಯರ್ ಔಟ್! 34 ವರ್ಷದ ಆಟಗಾರನಿಗೆ ಭಾರತ ತಂಡದ ಉಪನಾಯಕ ಪಟ್ಟ? | ಕ್ರೀಡಾ ಸುದ್ದಿ | ACTPnews

ಭಾರತ vs ಇಂಗ್ಲೆಂಡ್


Last Updated:

ಏಷ್ಯನ್ ಗೇಮ್ಸ್ ಹಾಗೂ ಭಾರತ -ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿ ಏಕಕಾಲದಲ್ಲಿ ನಡೆಯುತ್ತಿರುವುದರಿಂದ ಶ್ರೇಯಸ್​ ಅಯ್ಯರ್ ಟಿ20 ತಂಡದೊಂದಿಗೆ ಜಪಾನ್​ಗೆ ತೆರಳಲಿದ್ದಾರೆ. ಹಾಗಾಗಿ ಏಕದಿನ ತಂಡದ ಉಪನಾಯಕತ್ವ ತಂಡದ ಸೀನಿಯರ್ ಆಟಗಾರನಿಗೆ ಸಿಗಲಿದೆ ಎಂದು ವರದಿಯಾಗಿದೆ.

 ಭಾರತ vs ಇಂಗ್ಲೆಂಡ್
ಭಾರತ vs ಇಂಗ್ಲೆಂಡ್

ವೆಸ್ಟ್‌ ಇಂಡೀಸ್ (India vs West Indies) ವಿರುದ್ಧದ ಮುಂಬರುವ ಮೂರು ಪಂದ್ಯಗಳ ಏಕದಿನ (ODI) ಸರಣಿಗೆ ಭಾರತ ತಂಡದ ಉಪನಾಯಕನಾಗಿ ಕೆ.ಎಲ್. ರಾಹುಲ್ ಆಯ್ಕೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಖಾಯಂ ಉಪನಾಯಕ ಹಾಗೂ ತಂಡದ ನಿಯಮಿತ ಆಟಗಾರನಾಗಿರುವ ಶ್ರೇಯಸ್ ಅಯ್ಯರ್ ಅವರು ಜಪಾನ್‌ನಲ್ಲಿ ನಡೆಯಲಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿರುವ ಕಾರಣ ಈ ಸರಣಿಯಿಂದ ಹೊರಗುಳಿಯಲಿದ್ದಾರೆ. ಹಾಗಾಗಿ ತಂಡದಲ್ಲಿ ಇರುವ ಸೀನಿಯರ್ ಪ್ಲೇಯರ್ ರಾಹುಲ್ ಉಪನಾಯಕನಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports