Last Updated:
ಆಕಾಂಕ್ಷಾ ಚಮೋಲ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಪತಿ ಗೌರವ್ ಖನ್ನಾರನ್ನು ಅನ್ಫಾಲೋ ಮಾಡಿದ್ದು ಮಾತ್ರವಲ್ಲದೆ, ಹಳೆಯ ಫೋಟೋಗಳು, ಪೋಸ್ಟ್ಗಳು ಮತ್ತು ರೀಲ್ಸ್ಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.
ಕಿರುತೆರೆ ಲೋಕದ ಜನಪ್ರಿಯ ನಟ ಗೌರವ್ ಖನ್ನಾ (Gaurav Khanna) ಹಾಗೂ ಪತ್ನಿ ಆಕಾಂಕ್ಷಾ ಚಮೋಲ (Akanksha Chamola) ದಾಂಪತ್ಯದ ಕುರಿತು ಕಳೆದ ಕೆಲ ದಿನಗಳಿಂದ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ದಂಪತಿ ಬೇರ್ಪಟ್ಟಿದ್ದಾರೆ ಎಂಬ ವದಂತಿಗಳ ನಡುವೆ ಇದೀಗ ಮತ್ತೊಂದು ಬೆಳವಣಿಗೆ ಅಭಿಮಾನಿಗಳ ಗಮನ ಸೆಳೆದಿದೆ. ಆಕಾಂಕ್ಷಾ ಚಮೋಲ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ಪತಿ ಗೌರವ್ ಖನ್ನಾರನ್ನು ಅನ್ಫಾಲೋ ಮಾಡಿದ್ದು ಮಾತ್ರವಲ್ಲದೆ, ಹಳೆಯ ಫೋಟೋಗಳು, ಪೋಸ್ಟ್ಗಳು ಮತ್ತು ರೀಲ್ಸ್ಗಳನ್ನು ಕೂಡ ಡಿಲೀಟ್ ಮಾಡಿದ್ದಾರೆ ಎನ್ನಲಾಗಿದೆ.














