Nishu Azad: ಹಿಂದುತ್ವವಾದಿ ಸ್ವತಂತ್ರ ಭಾರದ್ವಾಜ್​ನಿಂದ ಹಲ್ಲೆ, ನೆರೆಹೊರೆಯವರಿಂದ ಕಿರುಕುಳ! ಸಿಜೆಪಿ ಹೋರಾಟಗಾರ್ತಿ ಕುಟಂಬ ಬೌದ್ಧ ಧರ್ಮಕ್ಕೆ ಮತಾಂತರ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ನಿಶು ಅಜಾದ್


Last Updated:

ಪ್ರಸ್ತುತ ಜಂತರ್-ಮಂತರ್ ಹಲ್ಲೆ ಪ್ರಕರಣ ಮತ್ತು ಅದರ ನಂತರ ನೆರೆಹೊರೆಯವರಿಂದ ಎದುರಾಗುತ್ತಿರುವ ಸಾಮಾಜಿಕ ಕಿರುಕುಳದ ಹಿನ್ನೆಲೆಯಲ್ಲಿ, ಅವರು ಶೀಘ್ರದಲ್ಲೇ ಎಲ್ಲಾ ಸರ್ಕಾರಿ ದಾಖಲೆಗಳಲ್ಲೂ (Documents) ಅಧಿಕೃತವಾಗಿ ತಮ್ಮ ಧರ್ಮವನ್ನು ಬೌದ್ಧ ಧರ್ಮ ಎಂದು ಬದಲಾಯಿಸಿಕೊಳ್ಳಲು ನಿರ್ಧರಿಸಿದ್ದಾರೆ.

ನಿಶು ಅಜಾದ್
ನಿಶು ಅಜಾದ್

ಗಾಜಿಯಾಬಾದ್: ಜಂತರ್-ಮಂತರ್‌ನಲ್ಲಿ ನಡೆದ ಪ್ರತಿಭಟನೆಯ (CJP Protest) ವೇಳೆ ದಲಿತ ಯುವತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಿಂದುತ್ವ ಹೋರಾಟಗಾರ ಸ್ವತಂತ್ರ ಭಾರದ್ವಾಜ್ (Swatantra Bhardwaj) ಎಂಬಾತ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ದೊಡ್ಡ ಅಪ್‌ಡೇಟ್ ಒಂದು ಮುನ್ನೆಲೆಗೆ ಬಂದಿದೆ. ನೊಂದ ಕುಟುಂಬವು ಇದೀಗ ಧರ್ಮಾಂತರದ ಕುರಿತು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ತಾವು ಶೀಘ್ರದಲ್ಲೇ ಅಧಿಕೃತವಾಗಿ ಬೌದ್ಧ ಧರ್ಮವನ್ನು ಅಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ. ತಮ್ಮ ಕುಟುಂಬವು ಈಗಾಗಲೇ ವೈಚಾರಿಕ ಮಟ್ಟದಲ್ಲಿ ಬೌದ್ಧ ಧರ್ಮದ ತತ್ವಗಳನ್ನು ಪಾಲಿಸುತ್ತಿದ್ದು, ಶೀಘ್ರದಲ್ಲೇ ದಾಖಲೆಗಳಲ್ಲೂ ಸಹ ಧರ್ಮ ಬದಲಾವಣೆಯನ್ನು ಅಧಿಕೃತವಾಗಿ ನಮೂದಿಸುವುದಾಗಿ ಸಂತ್ರಸ್ತ ಯುವತಿ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed