Last Updated:
ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆಗೆ ತುಪ್ಪ ಸೇವಿಸಲಾಗುತ್ತದೆ ಮತ್ತು ಅನೇಕ ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಲು ಸಹ ತುಪ್ಪ ಬಳಸಲಾಗುತ್ತದೆ. ಬೆಳಗಿನ ಸಮಯದ ಖಾಲಿ ಹೊಟ್ಟೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇವಿಸಿದರೆ ಹಲವು ಆರೋಗ್ಯ ಲಾಭಗಳು ಸಿಗುತ್ತವೆ
ಸಾಂಬಾರು ಪದಾರ್ಥಗಳ ರಾಜ ಎಂದು ಕರೆಯಲಾಗುವ ಕರಿಮೆಣಸು (Papper) ಎಲ್ಲರ ಅಡುಗೆ ಮನೆಯಲ್ಲೂ ಕಾಣಸಿಗುತ್ತದೆ. ಕರಿಮೆಣಸು ಆಹಾರಕ್ಕೆ ಪರಿಮಳವನ್ನು ನೀಡುವುದಷ್ಟೇ ಅಲ್ಲದೇ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಕರಿಮೆಣಸು ಚಳಿಗಾಲದಲ್ಲಿ (Winter) ನಿಮ್ಮ ಆರೋಗ್ಯ (Health) ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕರಿಮೆಣಸು ಇದರ ಕಟುವಾದ ರುಚಿ ಮತ್ತು ಅನೇಕ ಆರೋಗ್ಯ ಗುಣಗಳಿಂದ ಸಾಕಷ್ಟು ಉಪಯುಕ್ತವಾಗಿದೆ. ಹೆಚ್ಚುವರಿಯಾಗಿ, ಕರಿಮೆಣಸು ಜೀರ್ಣಕ್ರಿಯೆಗೆ ಉತ್ತಮ ಘಟಕಾಂಶವಾಗಿದೆ. ಇದು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಸಾಂದರ್ಭಿಕ ಚಿತ್ರ
ವಿವಿಧ ಬಗೆಯ ತಿಂಡಿ ತಿನಿಸುಗಳ ಜೊತೆಗೆ ತುಪ್ಪ ಸೇವಿಸಲಾಗುತ್ತದೆ ಮತ್ತು ಅನೇಕ ಬಗೆಯ ಆಹಾರ ಪದಾರ್ಥಗಳನ್ನು ತಯಾರು ಮಾಡಲು ಸಹ ತುಪ್ಪ ಬಳಸಲಾಗುತ್ತದೆ. ಬೆಳಗಿನ ಸಮಯದ ಖಾಲಿ ಹೊಟ್ಟೆಯಲ್ಲಿ ಒಂದು ಟೇಬಲ್ ಚಮಚ ತುಪ್ಪವನ್ನು ಸೇವಿಸಿದರೆ ಹಲವು ಆರೋಗ್ಯ ಲಾಭಗಳು ಸಿಗುತ್ತವೆ ಎಂದು ಸಂಶೋಧಕರು ಹೇಳುತ್ತಾರೆ. ತುಪ್ಪವು ವಿಟಮಿನ್ ಎ, ಡಿ, ಇ ಮತ್ತು ಕೆ ಅನ್ನು ಹೊಂದಿರುತ್ತದೆ ಹಾಗೂ ದೇಹಕ್ಕೆ ಉಪಯುಕ್ತ ಪೋಷಕಾಂಶಗಳನ್ನು ಪೂರೈಸುತ್ತದೆ ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ ಅನ್ನು ಸುಧಾರಿಸುತ್ತದೆ ಮತ್ತು ಅನೇಕ ಅಸ್ವಸ್ಥತೆಗಳನ್ನು ತಡೆಯುತ್ತದೆ. ತುಪ್ಪವು ದೈನಂದಿನ ವಿಟಮಿನ್ ಇ ಸೇವನೆಯ 11% ಮತ್ತು ವಿಟಮಿನ್ ಎ ಯ 100% ಅನ್ನು ಒದಗಿಸುತ್ತದೆ. ಜೊತೆಗೆ ಇದು ಬ್ಯುಟರಿಕ್ ಆಮ್ಲವನ್ನು ಹೊಂದಿದೆ. ಈ ಕಾರಣಗಳಿಂದ ಕರಿಮೆಣಸಿನ ಪುಡಿಯನ್ನು ತುಪ್ಪದೊಂದಿಗೆ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಕಡಿಮೆಯಾಗುತ್ತವೆ.
- ಬಿಳಿ ರಕ್ತಕಣ: ನಿಮ್ಮ ಆಹಾರದಲ್ಲಿ ಕರಿಮೆಣಸನ್ನು ಸೇರಿಸುವುದು ನಿಮ್ಮ ದೇಹದಲ್ಲಿನ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಹೆಚ್ಚಿಸಲು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ಇದರಿಂದ ದೇಹವು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
- ಜೀರ್ಣಕ್ರಿಯೆ: ಕರಿಮೆಣಸು ಹೊಟ್ಟೆಯಲ್ಲಿ ಹೈಡ್ರೋಕ್ಲೋರಿಕ್ ಆಮ್ಲದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಕರಿಮೆಣಸಿನಿಂದ ಹೊಟ್ಟೆ ಉಬ್ಬರ, ಗ್ಯಾಸ್ ನಂತಹ ಸಮಸ್ಯೆಗಳೂ ಕಡಿಮೆಯಾಗುತ್ತವೆ. ಇದು ಕರುಳಿನ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ.
- ಆರೋಗ್ಯಕರ ಚರ್ಮ ಮತ್ತು ಕೂದಲು: ಕರಿಮೆಣಸನ್ನು ಡರ್ಮಟೈಟಿಸ್‌ನಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹ ಬಳಸಬಹುದು.
- ಕ್ಯಾನ್ಸರ್ ತಡೆಗಟ್ಟುವಿಕೆ: ಕರಿಮೆಣಸಿನಲ್ಲಿರುವ ಗುಣಲಕ್ಷಣಗಳು ದೇಹದಲ್ಲಿನ ಗೆಡ್ಡೆಯ ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಕ್ಯಾನ್ಸರ್ ಅನ್ನು ತಡೆಯಲು ಕೂಡ ಸಹಾಯ ಮಾಡುತ್ತದೆ.
- ಬ್ಲಡ್ ಶುಗರ್ ಲೆವೆಲ್: ಕರಿಮೆಣಸು ರಕ್ತದಲ್ಲಿನ ಗ್ಲೂಕೋಸ್ ಚಯಾಪಚಯವನ್ನು ಹೆಚ್ಚಿಸಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಅತ್ಯುತ್ತಮವಾಗಿದೆ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.
ಮೊದಲು ಕರಿಮೆಣಸನ್ನು ಪುಡಿ ಮಾಡಿ ಇಟ್ಟುಕೊಳ್ಳಿ. ಈಗ ಒಂದು ಚಮಚ ತುಪ್ಪಕ್ಕೆ ಒಂದು ಚಿಟಿಕೆ ಕರಿಮೆಣಸಿನ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)













