Last Updated:
ಸಾಮಾನ್ಯವಾಗಿ ಇಂಡೋನೇಷಿಯಾ ಮತ್ತು ಮಲೇಷ್ಯಾದ ಮಳೆಕಾಡುಗಳಲ್ಲಿ ಮಾತ್ರ ಕಂಡುಬರುವ ಈ ಪ್ರಾಣಿಗಳು ಭಾರತದ ಒಡಿಶಾದಲ್ಲಿ ತಲುಪಿದ್ದು ಹೇಗೆ?
ಒಡಿಶಾ (Odisha) ಬಾಲೇಶ್ವರ ಜಿಲ್ಲೆಯಲ್ಲಿ ಅತ್ಯಂತ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಭೋಗರಾಯ್ ಅರಣ್ಯ ಪ್ರದೇಶದಲ್ಲಿ ಐದು ಒರಾಂಗುಟಾನ್‌ಗಳನ್ನು (Orangutan) ಪತ್ತೆಹಚ್ಚಲಾಗಿದೆ. ಈ ಎಲ್ಲಾ ಒರಾಂಗುಟಾನ್‌ಗಳು ಸುಮಾರು 1 ರಿಂದ 2 ವರ್ಷ ವಯಸ್ಸಿನ ಮರಿಗಳಾಗಿದ್ದು, ಇಂಡೋನೇಷಿಯಾ (Indonesia) ಮತ್ತು ಮಲೇಷ್ಯಾದ (Malaysia) ಮಳೆಕಾಡುಗಳಲ್ಲಿ ಕಂಡುಬರುವ ಈ ಪ್ರಾಣಿಗಳು ಭಾರತಕ್ಕೆ ತಲುಪಿದ್ದು ಹೇಗೆ ಎಂಬುದು ಅತ್ಯಂತ ದೊಡ್ಡ ಪ್ರಶ್ನೆಯಾಗಿದೆ.














