Last Updated:
ಕಳೆದ 15 ಗಂಟೆಗಳಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿದ್ದು, ಎನ್ಡಿಆರ್ಎಫ್, ದೆಹಲಿ ಅಗ್ನಿಶಾಮಕ ಸೇವೆ ಮತ್ತು ದೆಹಲಿ ಪೊಲೀಸರು ಸೇರಿದಂತೆ ಹಲವಾರು ಏಜೆನ್ಸಿಗಳ ತಂಡಗಳು ಭಾರೀ ಅವಶೇಷಗಳನ್ನು ತೆಗೆದುಹಾಕುತ್ತಿವೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ (Delhi Building Collapse) ನಿನ್ನೆ ಬಹುಮಹಡಿ ಕಟ್ಟಡ ಕುಸಿದು ಬಿದ್ದಿದ್ದು, ಈ ಸುದ್ದಿ ಬರೆಯುವತನಕ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ, ಉಳಿದವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.














