Last Updated:
ದೇಶದ ಹಲವು ಭಾಗಗಳಲ್ಲಿ ಮಳೆಯ ಆರ್ಭಟ ತಗ್ಗಿದೆ. ಇದು ಮುಂಗಾರು ಮುಗಿಯುವ ಲಕ್ಷಣವೇ ಅಥವಾ ಮುಂದಿನ ದಿನಗಳಲ್ಲಿ ಮತ್ತೆ ಮಳೆ ಬರಲಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.
ಎಲ್ ನಿನೋ ಅಬ್ಬರಕ್ಕೆ ಕರ್ನಾಟಕ (Karnataka) ಸೇರಿದಂತೆ ದೇಶದ ಹಲವು ರಾಜ್ಯಗಳು ತತ್ತರಿಸಿ ಹೋಗಿವೆ. ಬಿಸಿಲು ಮೈ ಸುಡುತ್ತಿದ್ದು, ಜನರು ಆಕಾಶದತ್ತ ಮುಖ ಮಾಡಿದ್ದಾರೆ. ಮಳೆಗಾಲದಲ್ಲೂ ಮಳೆ (Rain) ಮಾಯವಾಗಿದೆ. ಆಗಸ್ಟ್ ಕಳೆದು ಸೆಪ್ಟೆಂಬರ್ ಬಂತು ಆದ್ರೆ, ಹಲವೆಡೆ ಮಳೆಯಾಗದೇ ಇರುವುದು ಆತಂಕಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ತಾಪಮಾನ ಹೆಚ್ಚಿದೆ. ಇನ್ನು ರಾಜ್ಯದಲ್ಲಿ ಮಳೆ ಆಗುವ ಸಾಧ್ಯತೆ ಕಾಣುತ್ತಿಲ್ಲ. ಹೀಗಾಗಿ ಸರ್ಕಾರ ಮೋಡ ಬಿತ್ತನೆಗೆ (Cloud Seeding) ಇಳಿದಿದೆ. ಮತ್ತೊಂದೆಡೆ ನೇಪಾಳದಲ್ಲಿ (Nepal) ಜಲಪ್ರಳಯಕ್ಕೆ ಹಳ್ಳಿಗಳೇ ಕೊಚ್ಚಿ ಹೋಗುತ್ತಿವೆ. ಇತ್ತ ಭಾರತದಲ್ಲಿ ಮಾತ್ರ ಎಲ್ ನಿನೋಗೆ ಹಲವು ರಾಜ್ಯಗಳು ತತ್ತರಿಸಿವೆ.














