Last Updated:
ಕೇರಳದ ಕೊಲ್ಲಂನ ಸೂರನಾಡ್ ನಿವಾಸಿ ಲಾಟರಿ ಮಾರಾಟಗಾರ ಪೊನ್ನನ್ ಕುಟುಂಬ, ಕೇರಳ ರಾಜ್ಯ ಲಾಟರಿಯ ವಿಶು ಬಂಪರ್ ಬಿಆರ್-109 ನಲ್ಲಿ VB 135452 ಟಿಕೆಟ್ ಮೂಲಕ 12 ಕೋಟಿ ಮೊದಲ ಬಹುಮಾನ ಗೆದ್ದು ಸಾಲಬಾಧೆಯಿಂದ ಹೊರಬಂದಿದೆ
ಕೇರಳ: ಅದೃಷ್ಟ ಅನ್ನೋದು ಯಾವಾಗ, ಯಾರಿಗೆ, ಹೇಗೆ ಒಲಿಯುತ್ತೆ ಅಂತ ಯಾರೂ ಊಹಿಸಲು ಸಾಧ್ಯವಿಲ್ಲ! ಇಲ್ಲೊಂದು ಬಡ ಕುಟುಂಬಕ್ಕೆ ರಾತ್ರೋರಾತ್ರಿ ಅದೃಷ್ಟದ ದೇವತೆ (Goddess) ಭರ್ಜರಿಯಾಗಿ ಒಲಿದಿದ್ದಾಳೆ. ಪ್ರತಿದಿನ ರಸ್ತೆ ಬದಿಯಲ್ಲಿ ಲಾಟರಿ ಟಿಕೆಟ್ ಮಾರಾಟ (Ticket Sale) ಮಾಡಿ ಜೀವನ ನಡೆಸುತ್ತಿದ್ದ ಕುಟುಂಬವೊಂದು (Family) ಈಗ ಬರೋಬ್ಬರಿ 12 ಕೋಟಿ ರೂಪಾಯಿ ಮೊತ್ತದ ಮೊದಲ ಬಹುಮಾನ ಗೆದ್ದು ಇಡೀ ದೇಶವೇ (Nation) ತನ್ನತ್ತ ತಿರುಗಿ ನೋಡುವಂತೆ ಮಾಡಿದೆ! ಶನಿವಾರ ನಡೆದ ಕೇರಳ ರಾಜ್ಯ ಲಾಟರಿಯ ‘ವಿಶು ಬಂಪರ್ ಬಿಆರ್-109’ ಡ್ರಾದಲ್ಲಿ ಈ ಪವಾಡ ನಡೆದಿದ್ದು, ವಿಬಿ 135452 (VB 135452) ಸಂಖ್ಯೆಯ ಟಿಕೆಟ್ಗೆ ಈ ಅಗ್ರ ಬಹುಮಾನ ಬಂದಿದೆ.
ಕೇರಳದ ಕೊಲ್ಲಂ ಜಿಲ್ಲೆಯ ಕರುಣಗಪ್ಪಳ್ಳಿಯ ಸೂರನಾಡ್ ನಿವಾಸಿ, 76 ವರ್ಷದ ಪೊನ್ನನ್, ಅವರ ಪತ್ನಿ ರಾಧಾಮಣಿ ಮತ್ತು ಮಗ ವಿನೋದ್ ಈ ಮಹಾ ಲಾಟರಿ ಗೆದ್ದ ಅದೃಷ್ಟವಂತರು. ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಈ ಮೂವರೂ ಲಾಟರಿ ಟಿಕೆಟ್ ಮಾರಾಟ ಮಾಡಲು ಪ್ರಾರಂಭಿಸಿದ್ದರು. ಪ್ರತಿದಿನ ರಸ್ತೆ ರಸ್ತೆಯಲ್ಲಿ ನಡೆದುಕೊಂಡು ಹೋಗಿ ಲಾಟರಿ ಮಾರುತ್ತಿದ್ದ ಪೊನ್ನನ್ ಮತ್ತು ಮಗ ವಿನೋದ್, ಈ ಬಾರಿಯೂ ಮಾರಲು ತಂದಿದ್ದ ಟಿಕೆಟ್ಗಳಲ್ಲಿ ತಮಗಾಗಿ ಒಂದು ಟಿಕೆಟ್ ಇಟ್ಟುಕೊಂಡಿದ್ದರು. ಅದೇ ಟಿಕೆಟ್ ಈಗ ಇವರ ಇಡೀ ಬದುಕನ್ನೇ ಬದಲಾಯಿಸಿದೆ!
“ನನ್ನ ಅದೃಷ್ಟದ ಸಂಖ್ಯೆ 2. ನಾನು ತಂದಿದ್ದ ಟಿಕೆಟ್ನ ಕೊನೆಯ ಸಂಖ್ಯೆಯೂ 2 ಆಗಿತ್ತು. ನಾನು ಗೆದ್ದಿದ್ದೇನೆ ಎಂದು ಖಚಿತಪಡಿಸಿಕೊಳ್ಳಲು ಹತ್ತಾರು ಬಾರಿ ನಂಬರ್ ಚೆಕ್ ಮಾಡಿದೆ, ನನಗೆ ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ!” ಎಂದು ಪೊನ್ನನ್ ಆಶ್ಚರ್ಯದಿಂದ ಹೇಳಿದ್ದಾರೆ. ಇತ್ತ ಪತ್ನಿ ರಾಧಾಮಣಿ “ನನ್ನ ಗಂಡ ಈಗ ಕೋಟ್ಯಧಿಪತಿಯಾಗಿದ್ದಾರೆ” ಎಂದು ಸಂತೋಷದಿಂದ ಕಣ್ಣೀರು ಹಾಕಿದ್ದಾರೆ.
12 ಕೋಟಿ ರೂಪಾಯಿ ಕೈಗೆ ಬರುತ್ತಿದ್ದಂತೆ ಪೊನ್ನನ್ ಅವರು ತಮ್ಮ ಮುಂದಿನ ಪ್ರಮುಖ ಆದ್ಯತೆಗಳ ಬಗ್ಗೆ ಮಾತನಾಡಿದ್ದಾರೆ, ಪೊನ್ನನ್ ಅವರ ಮಗ ವಿನೋದ್ಗೆ ಮದುವೆ ಮಾಡಲು ಒಳ್ಳೆಯ ಹೆಣ್ಣು ಸಿಗುತ್ತಿರಲಿಲ್ಲ. ಈ ಬಗ್ಗೆ ಮನಬಿಚ್ಚಿ ಮಾತನಾಡಿದ ಪೊನ್ನನ್, “ಬಡ ಕುಟುಂಬದಲ್ಲಿ ಯಾರಿಗಾದರೂ ವಧು ಸಿಗುವುದು ತುಂಬಾ ಕಷ್ಟ. ಆದರೆ ಈಗ ನಮ್ಮ ಬಳಿ ಕೋಟ್ಯಂತರ ಹಣವಿದೆ. ಇನ್ಮುಂದೆಯಾದರೂ ನನ್ನ ಮಗನಿಗೆ ಒಳ್ಳೆಯ ಸಂಬಂಧ ಸಿಗುತ್ತಾ ಎಂದು ನೋಡಬೇಕು” ಎಂದು ಹೇಳಿದ್ದಾರೆ.
ಹೊಟ್ಟೆ ಹೊರೆಯುತ್ತಿದ್ದ ಲಾಟರಿ ಹೊನ್ನಿನಂತಹ ಕೊಡುಗೆ
Bangalore [Bangalore],Bangalore,Karnataka













