Last Updated:
ಕಳೆದ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಕ್ರಿಕೆಟ್ ತಂಡ ಚಿನ್ನ ಗೆದ್ದಿತ್ತು. ಆದ್ದರಿಂದ 2026ರಲ್ಲೂ ಅದೇ ರೀತಿ ಗೆಲ್ಲಲು ಟೀಮ್ ಇಂಡಿಯಾ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಬಿಸಿಸಿಐ ಎಲ್ಲಾ ಸ್ಟಾರ್ ಆಟಗಾರರನ್ನು ಒಳಗೊಂಡ ಮುಖ್ಯ ತಂಡವನ್ನು ಕಳುಹಿಸುತ್ತಿದೆ.
ಏಷ್ಯನ್ ಗೇಮ್ಸ್ (Asian Games) 2026 ಸೆಪ್ಟೆಂಬರ್ 19ರಂದು ಜಪಾನ್(Japan)ನಲ್ಲಿ ಆರಂಭವಾಗುತ್ತದೆ. ಆದರೆ ಭಾರತ(India)ದ ಪುರುಷರ ಕ್ರಿಕೆಟ್ (Cricket) ತಂಡದ ಮೊದಲ ಪಂದ್ಯ ಸೆಪ್ಟೆಂಬರ್ 28ರಂದು ಕ್ವಾರ್ಟರ್ ಫೈನಲ್ನಲ್ಲಿದೆ. ಭಾರತ ತಂಡ ಈಗಲೇ ಅದಕ್ಕೆ ಸಿದ್ಧತೆ ನಡೆಸುತ್ತಿದೆ. ಜಪಾನ್ನಲ್ಲಿ ಕ್ರಿಕೆಟ್ ಹೆಚ್ಚು ಆಡದ ಪಿಚ್(Pitch)ನಲ್ಲಿ ಆಡಬೇಕಾಗುವುದರಿಂದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ಹೆಡ್ ಕೋಚ್ ವಿವಿಎಸ್ ಲಕ್ಷ್ಮಣ್ (VVS Laxman) ಮೇಲೆ ಒತ್ತಡ ಇದೆ.














