Last Updated:
ರಶ್ಮಿಕಾ ಮಂದಣ್ಣ ಅಭಿನಯದ ಮೈಸಾ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದನ್ನ ಹೇಳಲಿಕ್ಕೆ ಬಿಟ್ಟಿರೋ ಪೋಸ್ಟರ್ ಕೂಡ ಇಂಟ್ರಸ್ಟಿಂಗ್ ಆಗಿದೆ. ಈ ಚಿತ್ರದ ರಿಲೀಸ್‌ನ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ಆ್ಯಕ್ಷನ್ ಪ್ಯಾಕ್ ‘ಮೈಸಾ’ ಚಿತ್ರದ (Mysaa Movie) ಹೊಸ ಮಾಹಿತಿ ಹೊರ ಬಂದಿದೆ. ಈ ಚಿತ್ರ ಟಾಲಿವುಡ್ ಅಂಗಳದಲ್ಲಿ ನಿರೀಕ್ಷೆ ಹುಟ್ಟಿಸುತ್ತಿದೆ. ರಶ್ಮಿಕಾ ಮಂದಣ್ಣ ಸಿನಿಮಾ ಅನ್ನುವ ಕಾರಣಕ್ಕೂ ಈ ಚಿತ್ರಕ್ಕೆ ಹೈಪ್ ಇದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ಖಡಕ್ ರೋಲ್ ಮಾಡಿದ್ದಾರೆ. ಆ್ಯಕ್ಷನ್ ಕೂಡ ಅಷ್ಟೆ ಅದ್ಭುತವಾಗಿಯೇ ಮಾಡಿದ್ದಾರೆ. ಕಾಡಿನೊಳಗಿನ ಆ್ಯಕ್ಷನ್‌ಗಳು ಜೋರಾಗಿಯೇ ಇವೆ. ಆ ರೀತಿಯ ಈ ಚಿತ್ರದ ರಿಲೀಸ್ ಡೇಟ್ (Movie Release Date) ಹೊರ ಬಂದಿದೆ. ಅದರ ವಿವರ ಇಲ್ಲಿದೆ ಓದಿ.














