Lionel Messi: ಫುಟ್​​ಬಾಲ್​​ ಅಭಿಮಾನಿಗಳಿಗೆ ಶಾಕ್! ಅಂತಾರಾಷ್ಟ್ರೀಯ ಫುಟ್​ಬಾಲ್​ಗೆ ವಿದಾಯ ಘೋಷಿಸಿದ ಲಿಯೋನಲ್ ಮೆಸ್ಸಿ! | ಕ್ರೀಡಾ ಸುದ್ದಿ | ACTPnews

ಲಿಯೋನೆಲ್ ಮೆಸ್ಸಿ (Photo: @WeAreMessi)

[ad_1]

Last Updated:


ಅರ್ಜೆಂಟೀನಾ ರಾಷ್ಟ್ರೀಯ ತಂಡಕ್ಕೆ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಲಿಯೋನೆಲ್ ಮೆಸ್ಸಿ, ತಮ್ಮ ಅಂತಾರಾಷ್ಟ್ರೀಯ ಕ್ರೀಡಾಜೀವನಕ್ಕೆ ಅಧಿಕೃತವಾಗಿ ಗುಡ್‌ಬೈ ಹೇಳಿದ್ದಾರೆ. 2022ರ ಫಿಫಾ ವಿಶ್ವಕಪ್ ಮುಕುಟ ಸೇರಿ ಹಲವು ಪ್ರಮುಖ ಟ್ರೋಫಿಗಳನ್ನು ದೇಶಕ್ಕೆ ತಂದುಕೊಟ್ಟಿದ್ದ ಮೆಸ್ಸಿ ಅವರ ಈ ದಿಢೀರ್ ನಿರ್ಧಾರ ಫುಟ್‌ಬಾಲ್ ಪ್ರಿಯರನ್ನು ಕಣ್ಣೀರಿಡುವಂತೆ ಮಾಡಿದೆ.

ಲಿಯೋನೆಲ್ ಮೆಸ್ಸಿ (Photo: @WeAreMessi)
ಲಿಯೋನೆಲ್ ಮೆಸ್ಸಿ (Photo: @WeAreMessi)

ಫುಟ್‌ಬಾಲ್ ಜಗತ್ತಿನಲ್ಲಿ ತಮ್ಮ ಅದ್ಭುತ ಆಟದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದ ಅರ್ಜೆಂಟೀನಾದ (Argentinian superstar) ಮಹಾನ್ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi), ಸೋಮವಾರ ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ (International Football) ನಿವೃತ್ತಿ ಘೋಷಿಸುವ ಮೂಲಕ ಇಡೀ ಕ್ರೀಡಾಲೋಕಕ್ಕೆ ದೊಡ್ಡ ಶಾಕ್ ನೀಡಿದ್ದಾರೆ. ಅರ್ಜೆಂಟೀನಾ ರಾಷ್ಟ್ರೀಯ ತಂಡದ ನೀಲಿ ಮತ್ತು ಬಿಳಿ ಜರ್ಸಿಯಲ್ಲಿ ಇನ್ನು ಮುಂದೆ ಮೆಸ್ಸಿ ಅವರ ಮ್ಯಾಜಿಕ್ ಆಟವನ್ನು ನೋಡಲು ಸಾಧ್ಯವಿಲ್ಲ ಎಂಬ ಸುದ್ದಿ ಅಭಿಮಾನಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಜಾಗತಿಕ ಫುಟ್‌ಬಾಲ್ ಇತಿಹಾಸದಲ್ಲಿ ಒಂದು ಸುವರ್ಣ ಯುಗ ಮುಕ್ತಾಯಗೊಂಡಂತಾಗಿದೆ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports