[ad_1]
Last Updated:
ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಸೋಲನ್ನು ಅನುಭವಿಸಿದ ನಂತರ, ಪಾಕಿಸ್ತಾನ ಎರಡನೇ ಟೆಸ್ಟ್‌ನಲ್ಲಿ 194 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿ ಇನ್ನು ಒಂದು ಪಂದ್ಯ ಇರುವಂತೆಯೇ ಸರಣಿ ಕಳೆದುಕೊಂಡಿರುವ ಹಿನ್ನಲೆಯಲ್ಲಿ ಪಿಸಿಬಿ ಕೋಚ್ ವಜಾ ಮಾಡಲು ಸಿದ್ದವಾಗಿದೆ.
ಪ್ರಸ್ತುತ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ (England Tour) ಪಾಕಿಸ್ತಾನ, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ ಆತಿಥೇಯರಿಗೆ ಸರಣಿಯನ್ನು 0-2 ಅಂತರದಲ್ಲಿ ಶರಣಾಗಿದೆ. ಮೊದಲ ಟೆಸ್ಟ್‌ನಲ್ಲಿ ಇನ್ನಿಂಗ್ಸ್ ಸೋಲನ್ನು ಅನುಭವಿಸಿದ ನಂತರ, ಪಾಕಿಸ್ತಾನ ಎರಡನೇ ಟೆಸ್ಟ್‌ನಲ್ಲಿ 194 ರನ್‌ಗಳ ಹೀನಾಯ ಸೋಲನ್ನು ಅನುಭವಿಸಿ ಇನ್ನು ಒಂದು ಪಂದ್ಯ ಇರುವಂತೆಯೇ ಸರಣಿ ಕಳೆದುಕೊಂಡಿತು. ಸರಣಿಯಲ್ಲಿ ನಾಲ್ಕು ಇನ್ನಿಂಗ್ಸ್ ಆಡಿರುವ ಪಾಕಿಸ್ತಾನ ಒಂದೇ ಒಂದು ಇನ್ನಿಂಗ್ಸ್‌ನಲ್ಲಿ 200ರ ಗಡಿ ದಾಟದಿರುವುದು ಅವರ ಹೀನಾಯ ಸೋಲಿಗೆ ಕಾರಣವಾಗಿದೆ. ಸತತ ಸೋಲುಗಳ ನಂತರ ಪಿಸಿಬಿ ಪಾಕಿಸ್ತಾನದ ಟೆಸ್ಟ್ ಕೋಚ್ ಆಗಿದ್ದ ಸರ್ಫರಾಜ್ ಅಹ್ಮದ್‌ರನ್ನ ಆ ಸ್ಥಾನದಿಂದ ವಜಾ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
[ad_2]
Source link














