Bigg Boss: ಸುದೀಪ್ ಜೊತೆ ಮೋಹನ್‌ಲಾಲ್, ನಾಗಾರ್ಜುನ, ವಿಜಯ ಸೇತುಪತಿ! ಒಂದೇ ಪ್ರೋಮೋದಲ್ಲಿ ದಿಗ್ಗಜರು! ಇದು ಬಿಗ್ ಬಾಸ್ ಮಹಾಸಂಗಮ! | | ACTPnews

News18


Last Updated:

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ನ ಹೊಸ ಸೀಸನ್‌ಗಳ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳಾದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಗ್ ಬಾಸ್ ಹೊಸ ಸೀಸನ್‌ಗಳು ಒಂದೇ ದಿನ ಆರಂಭವಾಗಲಿವೆ.

News18
News18

ದಕ್ಷಿಣ ಭಾರತದ ಕಿರುತೆರೆ ಲೋಕದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಬಿಗ್ ಬಾಸ್‌ನ (Bigg Boss) ನಾಲ್ವರು ಜನಪ್ರಿಯ ನಿರೂಪಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಕಿಚ್ಚ ಸುದೀಪ್ (Kiccha Sudeep), ಮಲಯಾಳಂನ ಮೋಹನ್‌ಲಾಲ್ (Mohanlal), ತೆಲುಗಿನ ನಾಗಾರ್ಜುನ ಹಾಗೂ ತಮಿಳಿನ ವಿಜಯ್ ಸೇತುಪತಿ (Vijay Sethupathi) ಒಂದೇ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ನಾಲ್ಕು ಭಾಷೆಗಳ ಬಿಗ್ ಬಾಸ್ ಸೀಸನ್‌ಗಳು ಒಂದೇ ದಿನ ಆರಂಭವಾಗುತ್ತಿರುವುದು ಈ ಬಾರಿಯ ವಿಶೇಷತೆಯಾಗಿದೆ.



Source link

Leave a Reply

Your email address will not be published. Required fields are marked *