Last Updated:
ಸಮಯ ಪ್ರಜ್ಞೆ, ಧೈರ್ಯ ಇದ್ದರೆ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಸಹ ನೂರಾರು ಜೀವಗಳನ್ನು ಉಳಿಸಬಹುದು ಎಂದು ನೇಪಾಳದ ಶಾಲೆಯ ಪ್ರಿನ್ಸಿಪಾಲ್ ಅವರು ಇಡೀ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ನೇಪಾಳದಲ್ಲಿ (Nepal) ಜಲಪ್ರಳಯ ಸೃಷ್ಟಿಯಾಗಿ 5 ದಿನಗಳೇ ಕಳೆದು ಹೋಗಿವೆ. ಆದರೂ ಸತ್ತವರೆಷ್ಟು, ಬದುಕಿದವರೆಷ್ಟು ಅನ್ನೋ ಲೆಕ್ಕಕ್ಕೆ ಬರಲು ಸಾಧ್ಯವಾಗಿಲ್ಲ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೀತಿದ್ದು, ಸಾವಿನ ಸಂಖ್ಯೆ 800ರ ಗಡಿದಾಟಿದೆ. ಈ ವರೆಗೆ 2,500ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ.














