Last Updated:
ಮೂಲತಃ ಉತ್ತರ ಪ್ರದೇಶದ ಉನ್ನಾವೊದವರಾಗಿದ್ದ ಧೀರೇಂದ್ರ ಪ್ರತಾಪ್ ಸಿಂಗ್ ಮಹಾರಾಣಾ ಪ್ರತಾಪ್ ವೆಲ್ಫೇರ್ ಫೌಂಡೇಶನ್‌ನ ಅಧ್ಯಕ್ಷರಾಗಿದ್ದರು.
ಉತ್ತರ ಪ್ರದೇಶ: ರಾಜಧಾನಿ ಲಕ್ನೋನಲ್ಲಿ (Lucknow) ಹಿಂದುಪರ ಸಂಘಟನೆಯ ಮುಖಂಡ ಧೀರೇಂದ್ರ ಪ್ರತಾಪ್ ಸಿಂಗ್ (Dhirendra Pratap Singh) ಅವರು ಬರ್ಬರವಾಗಿ ಹತ್ಯೆಯಾಗಿದ್ದಾರೆ. ಹಿಂದೂ ಯುವ ವಾಹಿನಿ ನಾಯಕ ಧೀರೇಂದ್ರ ಪ್ರತಾಪ್ ಸಿಂಗ್ ಅವರನ್ನು ಅವರ ಫಾರ್ಚೂನರ್ ಕಾರಿನಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದ್ದು, ಶವವು ಕಾಲುವೆಯಲ್ಲಿ ಪತ್ತೆಯಾಗಿದೆ. ಮೂಲತಃ ಉತ್ತರ ಪ್ರದೇಶದ (Uttar Pradesh) ಉನ್ನಾವೊದವರಾಗಿದ್ದ ಧೀರೇಂದ್ರ ಪ್ರತಾಪ್ ಸಿಂಗ್ ಮಹಾರಾಣಾ ಪ್ರತಾಪ್ ವೆಲ್ಫೇರ್ ಫೌಂಡೇಶನ್‌ನ ಅಧ್ಯಕ್ಷರಾಗಿದ್ದರು.














