Last Updated:
ಮಲಯಾಳಂ ನಟ ವಿನಾಯಕನ್ (Actor Vinayakan), ತಮ್ಮ ವೈಯಕ್ತಿಕ ಜೀವನದ ನೋವಿನ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ.
ರಜನಿಕಾಂತ್ (Rajinikanth) ಅಭಿನಯದ ಜೈಲರ್ (Jailer) ಸಿನಿಮಾದಲ್ಲಿ ವರ್ಮನ್ ಪಾತ್ರದ ಮೂಲಕ ದೇಶಾದ್ಯಂತ ಸಂಚಲನ ಮೂಡಿಸಿದ್ದ ಮಲಯಾಳಂ ನಟ ವಿನಾಯಕನ್ (Actor Vinayakan), ತಮ್ಮ ವೈಯಕ್ತಿಕ ಜೀವನದ ನೋವಿನ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಖಳನಾಯಕನಾಗಿ ಅಬ್ಬರಿಸುವ ನಟನ ನಿಜ ಜೀವನದಲ್ಲಿ ಮಾತ್ರ ಒಂಟಿತನ ಕಾಡುತ್ತಿದೆ. ಸುಮಾರು ನಾಲ್ಕು ದಶಕಗಳ ದಾಂಪತ್ಯ ಜೀವನದ ಬಳಿಕ ಪತ್ನಿಯಿಂದ ಬೇರ್ಪಟ್ಟಿರುವ ವಿನಾಯಕನ್, ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಮನದಾಳದ ನೋವನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ.














