Last Updated:
ಕೆಎಸ್‌ಆರ್‌ಟಿಸಿ ಬೆಂಗಳೂರಿನಿಂದ ಹಂಪಿಗೆ ನೇರ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ಆರಂಭಿಸಿದೆ, ಪ್ರತಿದಿನ ರಾತ್ರಿ ಮಜೆಸ್ಟಿಕ್ ನಿಂದ ಹೊರಟು ಬೆಳಗ್ಗೆ ಹಂಪಿ ತಲುಪುವ ಈ ಸೇವೆಯ ಟಿಕೆಟ್ ದರ 832 ರಿಂದ 902 ರೂಪಾಯಿ
ಬೆಂಗಳೂರು: ಹಂಪಿ ನೋಡಬೇಕು ಅನ್ನೋ ಆಸೆ ಇದೆಯಾ? ಆದರೆ ಪ್ರೈವೇಟ್ ಬಸ್ (Private Bus) ಖರ್ಚು ನೋಡಿ ಹಿಂದೆ ಸರಿಯುತ್ತಿದ್ದೀರಾ? ಇನ್ನು ಚಿಂತೆ ಬೇಡ. ಕೆಎಸ್‌ಆರ್‌ಟಿಸಿ (KSRTC) ಬೆಂಗಳೂರಿನಿಂದ ಹಂಪಿಗೆ ನೇರ ಪಲ್ಲಕ್ಕಿ ನಾನ್-ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸಿದ್ದು, ರಾತ್ರಿ (Night) ಮಲಗಿ ಮುಂಜಾಒನೆ ಎದ್ದರೆ ಹಂಪಿ (Hampi) ತಲುಪಿರುತ್ತೀರಿ! ಇದು ಒಂದೇ ದಿನದ ಟ್ರಿಪ್‌ಗೆ ಅತ್ಯಂತ ಉತ್ತಮ ಆಯ್ಕೆ.
ಸರ್ವಿಸ್ ನಂಬರ್ 2259BNGHMP ಬೆಳಗ್ಗೆ ರಾತ್ರಿ 10:59 PM ಕ್ಕೆ ಮಜೆಸ್ಟಿಕ್ ಬಸ್ ಸ್ಟ್ಯಾಂಡ್ (BS Terminal 1) ನಿಂದ ಹೊರಡುತ್ತದೆ. ಸುಮಾರು 340-350 ಕಿ.ಮೀ ದೂರವನ್ನು 7 ಗಂಟೆ 30 ನಿಮಿಷದಲ್ಲಿ ಕ್ರಮಿಸಿ, ಬೆಳಗ್ಗೆ 6:29 AM ಕ್ಕೆ ಹಂಪಿ ತಲುಪುತ್ತದೆ. ಈ ಬಸ್ ಹೊಸಪೇಟೆಯಲ್ಲಿ ಬೆಳಗಿನ ಜಾವ 6 ಗಂಟೆಗೆ ಇರುತ್ತದೆ. ಪ್ರತಿದಿನ 7 ದಿನಗಳೂ ಈ ಸೇವೆ ಲಭ್ಯ. ಟಿಕೆಟ್ ದರ ಕೇವಲ ₹832 ರಿಂದ ₹902 ರೂಪಾಯಿ ಇದೆ.
ಬೆಂಗಳೂರಿನಲ್ಲಿ ಬೋರ್ಡಿಂಗ್ ಪಾಯಿಂಟ್‌ಗಳು ಹಲವು. ಮಜೆಸ್ಟಿಕ್ (ಮುಖ್ಯ), ನವರಂಗ್ ಪಾರ್ಕ್, ಯಶವಂತಪುರ (ಗೋವರ್ಧನ್ ಥಿಯೇಟರ್ ಹತ್ತಿರ), ಗೊರಗುಂಟೆಪಾಳ್ಯ (KLE ಡೆಂಟಲ್ ಕಾಲೇಜ್), ಜಾಲಹಳ್ಳಿ ಕ್ರಾಸ್ ಮತ್ತು ನೆಲಮಂಗಲ (ಕುಣಿಗಲ್ ಬೈಪಾಸ್). ನಿಮ್ಮ ಸ್ಥಳಕ್ಕೆ ಹತ್ತಿರದ ಸ್ಟಾಪ್‌ನಿಂದ ಹತ್ತಬಹುದು. ಬಸ್ ಚಿತ್ರದುರ್ಗ ಮತ್ತು ಕೂಡ್ಲಗಿ ಮಾರ್ಗದ ಮೂಲಕ ಸಾಗುತ್ತದೆ.
ನಸುಕಿನ ಜಾವದಲ್ಲಿ ಬೆಂಗಳೂರಿಗೆ ತಲುಪಬಹುದು!
Bangalore [Bangalore],Bangalore,Karnataka













