Last Updated:
ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಕಳೆದ 2023ರ ಆಗಸ್ಟ್‌ನಿಂದ ಅದ್ಯಾಲ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದ ಪೆವಿಲಿಯನ್‌ನಲ್ಲಿ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕ್ ಆಥರ್ಟನ್ ಅವರೊಂದಿಗೆ ಮಾತನಾಡಿದ ಇಮ್ರಾನ್ ಖಾನ್ ಮಕ್ಕಳಾದ ಸುಲೇಮಾನ್ ಮತ್ತು ಕಾಸಿಮ್, ತಮ್ಮ ತಂದೆಯ ಜೀವಕ್ಕೆ ಅಪಾಯವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಕ್ರಿಕೆಟ್ ದಿಗ್ಗಜ ಇಮ್ರಾನ್ ಖಾನ್ (Imran Khan) ಅವರ ಜೈಲು ಶಿಕ್ಷೆ ಮತ್ತು ಆರೋಗ್ಯದ ಕುರಿತು ಅವರ ಮಕ್ಕಳು ನೀಡಿರುವ ಸ್ಫೋಟಕ ಸಂದರ್ಶನ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದೆ. ಲಾರ್ಡ್ಸ್ ಮೈದಾನದಲ್ಲಿ (Lords Ground) ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ‘ಸ್ಕೈ ಸ್ಪೋರ್ಟ್ಸ್’ ವಾಹಿನಿಯಲ್ಲಿ ಈ ಸಂದರ್ಶನ ಪ್ರಸಾರವಾಗುತ್ತಿದ್ದಂತೆ ಬೆಚ್ಚಿಬಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB), ಸಂದರ್ಶನ ತಡೆಯಲು ಪಂದ್ಯವನ್ನೇ ಬಹಿಷ್ಕರಿಸುವ ಬೆದರಿಕೆ ಹಾಕಿತ್ತು. ಇಷ್ಟಕ್ಕೂ ಇಮ್ರಾನ್ ಖಾನ್ ಮಕ್ಕಳು ಆ ಸಂದರ್ಶನದಲ್ಲಿ ಹೇಳಿದ್ದೇನು? ಪಾಕಿಸ್ತಾನ ಸರ್ಕಾರ ಯಾಕೆ ಇಷ್ಟೊಂದು ಹೆದರಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಈ ಸುದ್ದಿಯಲ್ಲಿ ತಿಳಿಯೋಣ.














