Last Updated:
ಟಾಕ್ಸಿಕ್ ಚಿತ್ರದಲ್ಲಿ ಯಶ್ ಹಾಗೂ ನಯನತಾರಾ ಎಂಟ್ರಿ ಸೀನ್ ಸಖತ್ ಆಗಿದೆ. ಈ ದೃಶ್ಯವನ್ನು ಫೋನ್ ಅಲ್ಲಿ ಅದ್ಯಾರೋ ಶೂಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಹಾಕಿದ್ದಾರೆ. ಆದರೆ, ಕೊನೆಗೆ ಕೆಲವು ಹೊತ್ತಿನ ಬಳಿಕ ಡಿಲೀಟ್ ಕೂಡ ಮಾಡಿದ್ದಾರೆ. ಆ ಸೀನ್ ಅಲ್ಲಿ ಏನಿತ್ತು ಅನ್ನೋದು ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಯಶ್ ಹಾಗೂ ನಯನತಾರಾ (Nayanthara) ಸೀನ್ ರಿವೀಲ್ ಆಗಿದೆ. ಚಿತ್ರ ನೋಡಿದ ಅದ್ಯಾರೋ ಈ ಒಂದು ಸೀನ್ ಅನ್ನ ಫೋನ್ ಅಲ್ಲಿ ಶೂಟ್ ಮಾಡಿದ್ದಾರೆ. ಆ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲೂ ಶೇರ್ ಮಾಡಿಕೊಂಡಿದ್ದಾರೆ. ಈ ಒಂದು ಸೀನ್ ಅಲ್ಲಿ ನಯನತಾರಾ ಎಂಟ್ರಿ ಸಖತ್ ಆಗಿದೆ. ರಾಕಿ ಭಾಯ್ ಯಶ್ (Rocky Bhai Yash) ಎಂಟ್ರಿನೂ ಸೂಪರ್ ಆಗಿದೆ. ಚಿತ್ರದ ಮೊದಲ ಹಾಡಿನಲ್ಲಿ ಯಶ್ ಎಂಟ್ರಿ ಸೀನ್ (Yash Entry Scene) ಇತ್ತು ಅಲ್ವೇ? ಆ ದೃಶ್ಯದ ತುಣುಕು ಇದಾಗಿದೆ. ಈ ಒಂದು ಸೀನ್ ನೋಡಿದಾಗ ರವಿ ಬಸ್ರೂರು ಹಿನ್ನೆಲೆ ಸಂಗೀತದ ಮೋಡಿನೂ ಗೊತ್ತಾಗುತ್ತದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.














