Last Updated:
Ranveer Singh: ಡಾನ್ 3 ಚಿತ್ರದಿಂದ ನಟ ರಣವೀರ್ ಸಿಂಗ್ ಹೊರನಡೆದಿರುವ ವಿಚಾರ ಸಿನಿಮಾ ಜಗತ್ತಿನಲ್ಲಿ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ನಿರ್ದೇಶಕ-ನಿರ್ಮಾಪಕ ಫರ್ಹಾನ್ ಅಖ್ತರ್ ಅವರು ಸಿನಿಮಾ ನೌಕರರ ಒಕ್ಕೂಟ FWICE ನ ಮೆಟ್ಟಿಲೇರಿದ್ದಾರೆ.
ಬಾಲಿವುಡ್ನ ಬಹುನಿರೀಕ್ಷಿತ ಡಾನ್ 3 (Don 3) ಚಿತ್ರದ ವಿವಾದ ಈಗ ಹೊಸ ತಿರುವನ್ನು ಪಡೆದುಕೊಂಡಿದೆ . ನಟ ರಣವೀರ್ ಸಿಂಗ್ (Ranveer Singh) ಮತ್ತು ನಿರ್ದೇಶಕ-ನಿರ್ಮಾಪಕ ಫರ್ಹಾನ್ ಅಖರ್ (Farhan Akhtar) ನಡುವಿನ ವಿವಾದವು ಇದೀಗ ಮತ್ತೊಂದು ಹಂತ ತಲುಪಿದೆ. ನಿರ್ದೇಶಕ-ನಿರ್ಮಾಪಕ ಫರ್ಹಾನ್ ಅಖ್ತರ್ ಇದೀಗ ನಟ ರಣವೀರ್ ಸಿಂಗ್ ವಿರುದ್ಧ ಸಿನಿಮಾ ನೌಕರರ ಒಕ್ಕೂಟದ (FWICE) ಮೆಟ್ಟಿಲೇರಿದ್ದಾರೆ.
ಡಾನ್ 3 ಚಿತ್ರದಿಂದ ನಟ ರಣವೀರ್ ಸಿಂಗ್ ಹೊರನಡೆದಿರುವ ವಿಚಾರ ಸಿನಿಮಾ ಜಗತ್ತಿನಲ್ಲಿ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ನಿರ್ದೇಶಕ-ನಿರ್ಮಾಪಕ ಫರ್ಹಾನ್ ಅಖ್ತರ್ ಅವರು ಸಿನಿಮಾ ನೌಕರರ ಒಕ್ಕೂಟ FWICE ನ ಮೆಟ್ಟಿಲೇರಿದ್ದಾರೆ. FWICE ಸಂಸ್ಥೆಯು ಮೇ 25 ರಂದು ಪತ್ರಿಕಾಗೋಷ್ಠಿಯನ್ನು ನಿರ್ಧರಿಸಿದ್ದು, ಅಲ್ಲಿ ದೂರು ಪರಿಶೀಲನೆ ಬಳಿಕ ಅಂತಿಮ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆ ಇದೆ. FWICE ತನ್ನ ಪ್ರಾಥಮಿಕ ಹೇಳಿಕೆಯಲ್ಲಿ, ದೂರು ಪರಿಶೀಲನೆ IFTDA ಮುಖಾಂತರ ಸಾಗುತ್ತಿರುವುದನ್ನು ದೃಢಪಡಿಸಿದೆ.
ಈ ಪ್ರಕರಣವನ್ನು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘ IFTDA ಗೆ ರವಾನಿಸಲಾಗಿದ್ದು, ಫರ್ಹಾನ್ ಅಖ್ತರ್ ಸ್ವತಃ ಈ ಸಂಘದ ಸದಸ್ಯರಾಗಿರುವುದು ಗಮನಾರ್ಹ. IFTDA ಪ್ರಕರಣದ ಎಲ್ಲಾ ಅಂಶಗಳನ್ನು ಮೌಲ್ಯಮಾಪನ ಮಾಡಿದ ನಂತರವೇ ತಮ್ಮ ವರದಿಯನ್ನು FWICE ಗೆ ಸಲ್ಲಿಸಲಿದೆ.
ರಣವೀರ್ ಸಿಂಗ್ ಅವರು ಈ ವಿವಾದದ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಆದರೆ ಉದ್ಯಮ ವಲಯದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ, ಚಿತ್ರಕಥೆ ಮತ್ತು ಕ್ರಿಯೇಟಿವ್ ಡೈರೆಕ್ಷನ್ನಲ್ಲಿ ಉಂಟಾದ ಭಿನ್ನಾಭಿಪ್ರಾಯಗಳು ಮುಖ್ಯ ಕಾರಣವಾಗಿರಬಹುದು. ಡಾನ್ 3 ಚಿತ್ರದ ಕಥಾ ಹಂದರ ಮತ್ತು ಪಾತ್ರ ವಿನ್ಯಾಸ ರಣವೀರ್ ಅವರ ನಿರೀಕ್ಷೆಗೆ ಸರಿಯಾಗಿರಲಿಲ್ಲ ಎಂಬ ಊಹಾಪೋಹಗಳೂ ಕೇಳಿಬಂದಿವೆ.
ಫರ್ಹಾನ್ ಅಖ್ತರ್ ಅವರು ರಣವೀರ್ ಗೆ ಬದಲಾಗಿ ಹೊಸ ನಟರ ಆಯ್ಕೆಯ ಬಗ್ಗೆ ಯೋಚಿಸಿದ್ದರಂತೆ ಉದ್ಯಮ ವರದಿಗಳು ತಿಳಿಸಿವೆ. ಆದರೆ ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಚಿತ್ರ ಭಾರಿ ಯಶಸ್ಸು ಸಾಧಿಸಿದ ನಂತರ, ಈ ಯೋಜನೆಗಳಲ್ಲೂ ಬದಲಾವಣೆಗಳಾಗಿವೆ. ರಣವೀರ್ ಸಿಂಗ್ ಅವರ ವೃತ್ತಿಜೀವನ ಏರುತ್ತಿರುವುದರಿಂದ, ತಮ್ಮ ಮುಂದಿನ ಸಿನಿಮಾಗಳ ಆಯ್ಕೆಗಳನ್ನು ಮರುಪರಿಶೀಲಿಸಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಾನ್ 3 ಚಿತ್ರದ ಪೂರ್ವ ನಿರ್ಮಾಣ ಹಂತದಲ್ಲೇ ಸಾಕಷ್ಟು ವೆಚ್ಚವಾಗಿದ್ದು, ನಿರ್ಮಾಣ ಸಂಸ್ಥೆಯಾದ ಎಕ್ಸೆಲ್ ಎಂಟರ್ಟೈನ್ಮೆಂಟ್ ಸುಮಾರು 40 ಕೋಟಿ ರೂ ಪರಿಹಾರವನ್ನೂ ಪರಿಗಣಿಸುತ್ತಿದೆ ಎಂಬ ವರದಿ ಇದೆ. ರಣವೀರ್ ಸಿಂಗ್ ಈ ಮೊತ್ತವನ್ನು ಸರಿದೂಗಿಸಲು ಒಪ್ಪಿಕೊಂಡಿದ್ದಾರೆ ಎಂಬ ಮಾಹಿತಿ ಉದ್ಯಮದಲ್ಲಿ ಹರಿದಾಡುತ್ತಿದೆ. ನಿರ್ಮಾಪಕರು, ನಟನ ಅನುಮೋದನೆ ಮೇರೆಗೆ ಪೂರ್ವ ಕೆಲಸ ಆರಂಭಿಸಿರುವುದರಿಂದ, ಹಿಂತೆಗೆದುಕೊಂಡ ತೀರ್ಮಾನದಿಂದ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ನಿರ್ಮಾಪಕರ ಸಂಘವು ಈ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಲು ಮಧ್ಯಸ್ಥಿಕೆ ವಹಿಸಬಹುದು ಎಂಬ ವರದಿಗಳು ಹರಿದಾಡುತ್ತಿವೆ. ಎರಡು ಪಕ್ಷಗಳ ನಿಲುವುಗಳು ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ, ಸಾಮರಸ್ಯದ ಪರಿಹಾರ ಅಗತ್ಯವಾಗಿದೆ ಎಂದು ಉದ್ಯಮ ಪರಿಣಿತರ ಅಭಿಪ್ರಾಯವಾಗಿದೆ .
Bangalore [Bangalore],Bangalore,Karnataka













