Off Road Rally: ಕೆಸರಿನ ಹಾದಿಯಲ್ಲಿ ಜೀಪ್‌ಗಳ ಅಬ್ಬರ; ಚಿಕ್ಕಮಗಳೂರಿನ ಎಸ್ಟೇಟಲ್ಲಿ ಆಫ್‌ ರೋಡ್ ಡ್ರೈವ್ ಕಂಡು ಪ್ರೇಕ್ಷಕರು ಫಿದಾ! | ಕ್ರೀಡಾ ಸುದ್ದಿ | ACTPnews

ಇಲ್ಲಿ


Last Updated:

ಮಲೆನಾಡಿನ ಕಾಫಿ ತೋಟಗಳ ನಡುವೆ ಸಾಮಾನ್ಯವಾಗಿ ಮಳೆಯ ಸದ್ದು ಕೇಳಿಸುತ್ತೆ. ಆದರೆ ಚಿಕ್ಕಮಗಳೂರಿನ ಕೊಪ್ಪದಲ್ಲಿ ಕಾಫಿ ತೋಟಗಳ ಮಧ್ಯೆ ಈ ಬಾರಿ ಜೀಪ್‌ಗಳ ಎಂಜಿನ್ ಘರ್ಜನೆ ಕೇಳಿಬಂದಿದೆ. ಕೆಸರಿನಿಂದ ತುಂಬಿದ ಜಾರುವ ರಸ್ತೆ, ಆಳವಾದ ಗುಂಡಿ, ಕಡಿದಾದ ತಿರುವು… ಇವೆಲ್ಲವನ್ನೂ ದಾಟುತ್ತಾ ಥಾರ್, ಜಿಪ್ಸಿ ಸೇರಿದಂತೆ ಬಲಿಷ್ಠ ಜೀಪ್‌ಗಳು ನಡೆಸಿದ ಆಫ್‌ ರೋಡ್ ಡ್ರೈವ್ ನೋಡುಗರಿಗೆ ಭರ್ಜರಿ ರೋಚಕ ಅನುಭವ ನೀಡಿದೆ.”

+

ಇಲ್ಲಿ ವಿಡಿಯೋ ನೋಡಿ

ಚಿಕ್ಕಮಗಳೂರು: ಮಲೆನಾಡಿನ ಹಸಿರು ಬೆಟ್ಟಗಳು, ಕಾಫಿ ತೋಟಗಳು ಮತ್ತು ಮಳೆಯ ವಾತಾವರಣದ ನಡುವೆ ಜೀಪ್‌ಗಳ ಎಂಜಿನ್‌ಗಳು ಘರ್ಜಿಸಿದರೆ ಹೇಗಿರುತ್ತದೆ? ಅದರಲ್ಲೂ ರಸ್ತೆ ಸಂಪೂರ್ಣ ಕೆಸರಿನಿಂದ ತುಂಬಿ, ಕಡಿದಾದ ತಿರುವುಗಳು, ಆಳವಾದ ಗುಂಡಿಗಳು ಮತ್ತು ಏರು-ಇಳಿಜಾರುಗಳು ಎದುರಾದರೆ? ಇಂಥ ರೋಚಕ ದೃಶ್ಯಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಲಗೇಶ್ವರ ಎಸ್ಟೇಟ್ (Estate) ಸಾಕ್ಷಿಯಾಯಿತು. ಅಲಗೇಶ್ವರ ಎಸ್ಟೇಟ್‌ನ ಗುಡ್ಡಗಾಡು ಪ್ರದೇಶದಲ್ಲಿ ನಡೆದ ಆಫ್‌ರೋಡ್ ಡ್ರೈವ್ ರ‍್ಯಾಲಿಯಲ್ಲಿ (Rally) ಮಾರ್ಪಾಡು ಮಾಡಿದ್ದ ಮಹೀಂದ್ರಾ ಥಾರ್, ಜಿಪ್ಸಿ ಸೇರಿದಂತೆ ಹಲವು ಬಲಿಷ್ಠ ಜೀಪ್‌ಗಳು ಕೆಸರಿನ ಹಾದಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದವು. ಹೊರರಾಜ್ಯಗಳಿಂದ ಬಂದ ಸಾಹಸಪ್ರಿಯರೂ ಈ ಡ್ರೈವ್‌ನಲ್ಲಿ ಭಾಗವಹಿಸಿದ್ದರು. ಜೀಪ್‌ಗಳ ಕಸರತ್ತು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed