Vaibhav Sooryavanshi: ವೈಭವ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡೋದು ಯಾವಾಗ? ಶಿಷ್ಯನ ಭವಿಷ್ಯದ ಬಗ್ಗೆ ರಾಹುಲ್ ದ್ರಾವಿಡ್ ಮಹತ್ವದ ಹೇಳಿಕೆ | ಕ್ರೀಡಾ ಸುದ್ದಿ | ACTPnews

ವೈಭವ್ ಸೂರ್ಯವಂಶಿ


Last Updated:

ವೈಭವ್ ಅವರಲ್ಲಿ ಅದ್ಭುತ ಪ್ರತಿಭೆ ಮತ್ತು ಭಯವಿಲ್ಲದೆ ಆಡುವ ಸಾಮರ್ಥ್ಯವಿದೆ. ದೇಶಿ ಕ್ರಿಕೆಟ್‌ನಲ್ಲಿ ಉತ್ತಮವಾಗಿ ರನ್ ಗಳಿಸಿದರೆ, ಮುಂದೊಂದು ದಿನ ಅವರು ಭಾರತ ಟೆಸ್ಟ್ ತಂಡದ ಪ್ರಮುಖ ಆಟಗಾರನಾಗಿ ಹೊರಹೊಮ್ಮಲಿದ್ದಾರೆ ಮತ್ತು ಟೆಸ್ಟ್ ಕ್ರಿಕೆಟ್‌ನ ಬೆಳವಣಿಗೆಗೆ ಇಂತಹ ಆಟಗಾರರ ಅಗತ್ಯವಿದೆ ಎಂದು ದ್ರಾವಿಡ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ

ವೈಭವ್ ಸೂರ್ಯವಂಶಿ
ವೈಭವ್ ಸೂರ್ಯವಂಶಿ

ಐಪಿಎಲ್‌ನಲ್ಲಿ ಯಶಸ್ವಿ ಪ್ರದರ್ಶನ ನೀಡಿದ ನಂತರ, ವೈಭವ್ ಸೂರ್ಯವಂಶಿಯನ್ನ (Vaibhav Sooryavanshi) ಆದಷ್ಟು ಬೇಗ ಭಾರತ ತಂಡದಲ್ಲಿ ನೋಡಬೇಕೆಂಬ ಕೂಗು ಸಾಕಷ್ಟು ಕೇಳಿಬಂದಿತ್ತು. ಅದರಂತೆ ಅವರು ತಮ್ಮ 15ನೇ ವಯಸ್ಸಿಗೆ ಭಾರತ ಟಿ20 (T20I) ತಂಡಕ್ಕೆ ಪಾದಾರ್ಪಣೆ ಮಾಡಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಭಾರತ ತಂಡದ ಪರ ಅಂತಾರಾಷ್ಟ್ರೀಯ ಪಂದ್ಯವಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ದೀರ್ಘಕಾಲದ ದಾಖಲೆಯನ್ನು ಮುರಿದಿದ್ದಾರೆ. ಆದರೆ ಟಿ20 ಬೆನ್ನಲ್ಲೇ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್​​ನಲ್ಲೂ ಅವಕಾಶ ಕೊಡಬೇಕೆಂದು ಮಾಜಿ ಕ್ರಿಕೆಟಿಗರು, ಅಭಿಮಾನಿಗಳು ಬಯಸುತ್ತಿದ್ದಾರೆ. ಆದರೆ ವೈಭವ್ ಐಪಿಎಲ್ ಆಡಲು ನೆರವಾಗಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ವೃತ್ತಿಜೀವನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed