Last Updated:
ಟಾಕ್ಸಿಕ್ ಬಿಡುಗಡೆಗೆ ಕ್ಷಣಗಣನೆ ಶುರುವಾಗ್ತಿದ್ದಂತೆ, ಊರೂರಲ್ಲೂ ಯಶ್ ಹವಾ ಶುರುವಾಗಿದೆ. ಯಾವಾಗ ಟಾಕ್ಸಿಕ್ ಕಣ್ತುಂಬಿಕೊಳ್ತೀವೋ ಅಂತಾ ಜನ ಕಾದು ಕುಳಿತಿದ್ರೆ, ಸಿನಿಮಾ ಮಾತ್ರ ದಾಖಲೆ ಮೇಲೆ ದಾಖಲೆ ಬರೀತಿದೆ.
ಟಾಕ್ಸಿಕ್ (Toxic) ಅನ್ನೋದು ಟಾಕ್ ಆಫ್ ದಿ ಟೌನ್ ಆಗಿದೆ. ಇದೇ ಮೊದಲ ಬಾರಿಗೆ ಕನ್ನಡದ (Kannada) ಸಿನಿಮಾವೊಂದು (Cinema) ವರ್ಲ್ಡ್ ವೈಡ್ ರಿಲೀಸ್ ಆಗ್ತಿರೋದ್ರಿಂದ ವಿಶ್ವ ಮಟ್ಟದಲ್ಲಿ ಸದ್ದು ಮಾಡ್ತಿದೆ. ಟಾಕ್ಸಿಕ್ನ ಅಬ್ಬರಕ್ಕೆ ದಾಖಲೆಗಳೆಲ್ಲಾ ದೂಳೆಬ್ಬಿಸಿದ್ದು, ಮೊದಲ ದಿನವೇ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ.














