Last Updated:
ಕಾಲಿವುಡ್ನ ಹಿರಿಯ ನಟ ಶರತ್ ಕುಮಾರ್ ಮನೆಯಲ್ಲಿ ಅಪ್ಪು ಪ್ರತಿಮೆ ಇದೆ. ಇದನ್ನ ಪುನೀತ್ ನೆನಪಿಗಾಗಿಯೇ ಶರತ್ ಕುಮಾರ್ ಅವರು ಇಟ್ಟುಕೊಂಡಿದ್ದಾರೆ. ಆ ವಿಡಿಯೋ ಇದೀಗ ವೈರಲ್ ಆಗಿದೆ. ಇದರ ವಿವರ ಇಲ್ಲಿದೆ ಓದಿ.
ಕಾಲಿವುಡ್ನ ಹಿರಿಯ ನಟ ಶರತ್ಕುಮಾರ್ (Sarathkumar) ಅವರು ಬೆಂಗಳೂರಿನಲ್ಲಿಯೆ ಬೆಳೆದವರು. ಇಲ್ಲಿಗೆ ಬಂದಾಗ ನೆನಪಿಸಿಕೊಳ್ಳುವುದು ಇದೆ. ಕನ್ನಡ ಸಿನಿಮಾಗಳನ್ನೂ ಮಾಡಿದ್ದಾರೆ. ಪ್ರಮುಖ ಪಾತ್ರಗಳ ಮೂಲಕವೂ ಸೆಳೆದಿರೋ ಇದೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಜೊತೆಗೆ ಎರಡು ಸಿನಿಮಾ ಮಾಡಿದ್ದಾರೆ. ಇವರೆಡೂ ಚಿತ್ರದಲ್ಲಿ ವಿಶೇಷ ರೋಲ್ ಮಾಡಿದ್ದಾರೆ. ಒಂದು ಚಿತ್ರದಲ್ಲಿ ಅಪ್ಪನ ರೋಲ್ ಮಾಡಿದ್ದಾರೆ. ಪುನೀತ್ (Puneeth) ಅವರ ಕೊನೆಯ ಚಿತ್ರ ಜೇಮ್ಸ್ ಅಲ್ಲಿ ವಿಲನ್ ರೋಲ್ ಮಾಡಿದ್ದಾರೆ. ಆದರೆ, ಅಪ್ಪು (Appu) ಇಲ್ಲ ಅನ್ನುವ ಬೇಸರ ಇವರಿಗೂ ಇದೆ. ಅದಕ್ಕೇನೆ ಇವರು ಮನೆಯಲ್ಲಿ ಅಪ್ಪು ಪ್ರತಿಭೆ ಇಟ್ಟುಕೊಂಡಿದ್ದಾರೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.














