Last Updated:
ಆಸ್ಟ್ರೇಲಿಯಾದ ಗೆಲುವಿನ ನಂತರ, ಭಾರತೀಯ ಅಭಿಮಾನಿಗಳ ಮನಸ್ಸಿನಲ್ಲಿರುವ ದೊಡ್ಡ ಪ್ರಶ್ನೆಯೆಂದರೆ ಈ ಫಲಿತಾಂಶವು ಭಾರತೀಯ ತಂಡದ ಫೈನಲ್ ಹಾದಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು. ಬಾಂಗ್ಲಾದೇಶದ ಸೋಲು ಭಾರತ ತಂಡಕ್ಕೂ ಪ್ರಯೋಜನ ನೀಡಿದೆ. ಹೇಗೆ ಎನ್ನುವುದನ್ನ ಈ ಸುದ್ದಿಯಲ್ಲಿ ತಿಳಿಯಿರಿ.
ಮೆಕೆಯಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾ ಬಾಂಗ್ಲಾದೇಶವನ್ನು (Australia vs Bangladesh) ಇನ್ನಿಂಗ್ಸ್ ಮತ್ತು 51 ರನ್ಗಳಿಂದ ಸೋಲಿಸಿ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-1 ರಿಂದ ಸಮಬಲಗೊಳಿಸಿಕೊಂಡಿದೆ. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (World test Championship Final) ರೇಸ್ನಲ್ಲಿ ತನ್ನ ಅಗ್ರಸ್ಥಾನವನ್ನು ಮತ್ತಷ್ಟು ಬಲಿಷ್ಠ ಪಡಿಸಿಕೊಂಡಿದೆ. ಸರಣಿ ಸೋಲನ್ನು ತಪ್ಪಿಸಿಕೊಳ್ಳಬೇಕಿದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮಾರಕ ಬೌಲಿಂಗ್ ದಾಳಿ ನಡೆಸಿತು. ಮೊದಲ ಇನ್ನಿಂಗ್ಸ್ನಲ್ಲಿ ಬಾಂಗ್ಲಾದೇಶವನ್ನು 64 ರನ್ಗಳಿಗೆ ಆಲೌಟ್ ಮಾಡಿದ ಆಸ್ಟ್ರೇಲಿಯಾ, ನಂತರ ಬ್ಯಾಟಿಂಗ್ ಇಳಿದು 210 ರನ್ಗಳಿಸಿ 146 ರನ್ಗಳ ಮುನ್ನಡೆ ಸಾಧಿಸಿತು. ಎರಡನೇ ಇನ್ನಿಂಗ್ಸ್ನಲ್ಲಿ ಬಾಂಗ್ಲಾದೇಶ 95 ರನ್ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಮೊದಲ ಪಂದ್ಯವನ್ನು ಸೋತ ನಂತರ, ಆಸ್ಟ್ರೇಲಿಯಾ ಬಲವಾದ ಪುನರಾಗಮನವನ್ನು ಮಾಡಿದೆ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ.














