Last Updated:
ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 85 ಓವರ್ಗಳಲ್ಲಿ 5 ವಿಕೆಟ್ಗಳಿಗೆ 300 ರನ್ಗಳಿಸಿ ಉತ್ತಮ ಸ್ಥಿತಿಯಲ್ಲಿದೆ. ದೇವದತ್ ಪಡಿಕ್ಕಲ್ (117) ಶತಕ ಸಿಡಿಸಿದರೆ, ನಾಯಕ ಗಿಲ್ (50) ಅರ್ಧಶತಕ ಸಿಡಿಸಿ ಮೊದಲ ದಿನ ಭಾರತ 300 ರನ್ಗಳಿಸಲು ನೆರವಾದರು.
ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಭಾರತ ಮತ್ತು ಶ್ರೀಲಂಕಾ (India vs Sri Lanka) ನಡುವಿನ ಎರಡನೇ ಟೆಸ್ಟ್ನ ಮೊದಲ ದಿನ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಮಾಡುತ್ತಿರುವ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 85 ಓವರ್ಗಳಲ್ಲಿ 5 ವಿಕೆಟ್ಗಳಿಗೆ 300 ರನ್ಗಳಿಸಿ ಉತ್ತಮ ಸ್ಥಿತಿಯಲ್ಲಿದೆ. ದೇವದತ್ ಪಡಿಕ್ಕಲ್ (117) ಶತಕ ಸಿಡಿಸಿದರೆ, ನಾಯಕ ಗಿಲ್ (50) ಅರ್ಧಶತಕ ಸಿಡಿಸಿ ಮೊದಲ ದಿನ ಭಾರತ 300 ರನ್ಗಳಿಸಲು ನೆರವಾದರು. ಯುವ ವಿಕೆಟ್ ಕೀಪರ್ ಧ್ರುವ್ ಜುರೆಲ್ (7) ಮತ್ತು ಇಂದು ಪದಾರ್ಪಣೆ ಮಾಡಿರುವ ಸಾರಾಂಶ್ ಜೈನ್ (4) ಕ್ರೀಸ್ನಲ್ಲಿದ್ದಾರೆ.














