Last Updated:
ಬಾಲಿವುಡ್ನ ದಂತಕಥೆ ನಟಿ ಮಧುಬಾಲಾ (Madhubala) ಜೀವನಕಥೆಯನ್ನು ಆಧರಿಸಿದ ಬಹುನಿರೀಕ್ಷಿತ ಬಯೋಪಿಕ್ ಬಗ್ಗೆ ಈಗ ಮತ್ತೊಂದು ಕುತೂಹಲಕಾರಿ ಅಪ್ಡೇಟ್ ಹೊರಬಿದ್ದಿದೆ.
ಬಾಲಿವುಡ್ನ ದಂತಕಥೆ ನಟಿ ಮಧುಬಾಲಾ (Madhubala) ಜೀವನಕಥೆಯನ್ನು ಆಧರಿಸಿದ ಬಹುನಿರೀಕ್ಷಿತ ಬಯೋಪಿಕ್ ಬಗ್ಗೆ ಈಗ ಮತ್ತೊಂದು ಕುತೂಹಲಕಾರಿ ಅಪ್ಡೇಟ್ ಹೊರಬಿದ್ದಿದೆ. ಹಲವು ದಿನಗಳಿಂದ ಅಭಿಮಾನಿಗಳ ಗಮನ ಸೆಳೆದಿದ್ದ ಈ ಸಿನಿಮಾ ಇದೀಗ ಚಿತ್ರೀಕರಣದ ಹಂತಕ್ಕೆ ಕಾಲಿಡಲು ಸಜ್ಜಾಗಿದೆ. ಅದರಲ್ಲೂ ಧುರಂಧರ್ ಸಿನಿಮಾದ ಯಶಸ್ಸಿನ ಬಳಿಕ ನಟಿ ಸಾರಾ ಅರ್ಜುನ್ (Sara Arjun) ಮಧುಬಾಲಾ ಪಾತ್ರ ಸಿಕ್ಕಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ಈ ಸಿನಿಮಾ ಸೆಪ್ಟೆಂಬರ್ನಿಂದ ಚಿತ್ರೀಕರಣ ಆರಂಭಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.














