Last Updated:
ಕೆಜಿಎಫ್-1 ಶುಕ್ರವಾರ ಬಂದಿತ್ತು. ಕೆಜಿಎಫ್-2 ಗುರುವಾರ ರಿಲೀಸ್ ಆಗಿತ್ತು. ಆದರೆ, ಟಾಕ್ಸಿಕ್ ಯಾಕೆ ಬುಧವಾರ ಅನ್ನುವ ಕುತೂಹಲ ಇದೆ. ಇದರ ಸುತ್ತ ಒಂದಷ್ಟು ವಿವರ ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ (Yash) ಅಭಿನಯದ ಚಿತ್ರಗಳು ಶುಕ್ರವಾರ ಹಾಗೂ ಗುರುವಾರವೂ ರಿಲೀಸ್ ಆಗಿವೆ. ಆದರೆ, ಬುಧವಾರ ರಿಲೀಸ್ (Wednesday Release) ಆಗಿರೋದು ಇಲ್ವೇ ಇಲ್ಲ. ಆದರೆ, ಟಾಕ್ಸಿಕ್ ಚಿತ್ರದ (Toxic Movie) ವಿಷಯ ಹಾಗೆ ಅಲ್ವೇ ಅಲ್ಲ. ಈ ಚಿತ್ರ ಬುಧವಾರವೇ ರಿಲೀಸ್ ಆಗುತ್ತಿದೆ. ಆಗಸ್ಟ್-26 ರಂದು ಬುಧವಾರ ಈ ಚಿತ್ರ ತೆರೆ ಕಾಣುತ್ತಿದೆ. ಆದರೆ, ಯಾಕೆ ಅನ್ನುವ ಪ್ರಶ್ನೆನೂ ಇದೆ. ಇದರ ನಡುವೆ ನಂಬರ್-8 ಯಶ್ಗೆ ಲಕ್ಕಿ ಅನ್ನುವ ಮಾತುಗಳೂ ಇವೆ. 2 ಪ್ಲಸ್ 6 = 8 ಅನ್ನುವ ಲೆಕ್ಕಾಚಾರವ ಇದೆ.














