Last Updated:
ಟಾಕ್ಸಿಕ್ ಚಿತ್ರ ರಾಜ್ಯಾದ್ಯಂತ 500ಕ್ಕೂ ಹೆಚ್ಚು ಥಿಯೇಟರ್ ಅಲ್ಲಿ ರಿಲೀಸ್ ಆಗುತ್ತಿದೆ. ಮಲ್ಟಿಪ್ಲೆಕ್ಸ್ ಅಲ್ಲಿ ಟಿಕೆಟ್ ದರ 500 ದಾಟಿದೆ. ಇನ್ನು ಕೆಲವು ಮಲ್ಟಿಪ್ಲೆಕ್ಸ್ ಅಲ್ಲಿ 400 ರಿಂದಲೇ ಟಿಕೆಟ್ ದರ ಶುರು ಆಗುತ್ತದೆ. ಸಿಂಗಲ್ ಥಿಯೇಟರ್ ಅಲ್ಲಿ ಹೀಗೆ ಇಲ್ಲ ಬಿಡಿ. ಈ ಚಿತ್ರದ ಈ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಟಿಕೆಟ್ ಪ್ರತಿ ಗಂಟೆಗೆ ಸುಮಾರು 20 ಸಾವಿರಕ್ಕೂ ಹೆಚ್ಚು ಸೇಲ್ ಆಗಿವೆ. ಕೋಟಿ ಕೋಟಿ ಗ್ರಾಸ್ ಕಲೆಕ್ಷನ್ ಇದರಿಂದಲೇ ಆಗಿದೆ ಅನ್ನುವ ಮಾಹಿತಿನೂ ಬಿರ್ತಿದೆ. ಆದರೆ, ಕರ್ನಾಟಕದಲ್ಲಿ ಈ ಚಿತ್ರಗಳ ಟಿಕೆಟ್ ರೇಟ್ ಏನಿದೆ? ಮಲ್ಟಿಪ್ಲೆಕ್ಸ್ ಅಲ್ಲಿ (Multiplex) ಈ ಚಿತ್ರದ ಪ್ರತಿ ಟಿಕೆಟ್ ದರ (Ticket Rate) ಹೇಗಿದೆ? ಸಿಂಗಲ್ ಥೀಯೇಟರ್ (Single Theater) ಟಿಕೆಟ್ ದರ ಯಾವ ರೀತಿ ಇದೆ? ಈ ಬಗೆಗಿನ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.














