Last Updated:
Sugar Price: ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಸೇರಿದಂತೆ ಸಾಲು ಸಾಲು ಹಬ್ಬಗಳಿವೆ. ಈ ವೇಳೆ ಅಗತ್ಯವಾಗಿ ಸಕ್ಕರೆ ಬೇಕಾಗುತ್ತದೆ. ಆದರೆ ಈ ವೇಳೆ ಸಕ್ಕರೆ ಬೆಲೆ ಏರಿಕೆ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಆದರೆ ಈ ಬಾರಿ ಸರ್ಕಾರ ಸಕ್ಕರೆ ಬೆಲೆ ಏರಿಕೆಯನ್ನು ತಡೆಯಲು ಕ್ರಮ ಕೈಗೊಂಡಿದೆ.
ಶ್ರಾವಣ ಮಾಸದಲ್ಲಂತೂ ಸಾಲು ಸಾಲು ಹಬ್ಬಗಳು (festivals) ಇರುತ್ತವೆ. ನಾಗರಪಂಚಮಿ ಮುಗಿದಿದೆ, ಇಂದು ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮೇಳೈಸಿದೆ. ಇನ್ನು ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ (Ganesh Chaturthi) ಸೇರಿದಂತೆ ಸಾಲು ಸಾಲು ಹಬ್ಬಗಳಿವೆ. ಈ ವೇಳೆ ಅಗತ್ಯವಾಗಿ ಸಕ್ಕರೆ ಬೇಕಾಗುತ್ತದೆ. ಆದರೆ ಈ ವೇಳೆ ಸಕ್ಕರೆ ಬೆಲೆ (sugar price) ಏರಿಕೆ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಆದರೆ ಈ ಬಾರಿ ಸರ್ಕಾರ ಸಕ್ಕರೆ ಬೆಲೆ ಏರಿಕೆಯನ್ನು ತಡೆಯಲು ಕ್ರಮ ಕೈಗೊಂಡಿದ್ದು, ಹಬ್ಬದ ಸಂದರ್ಭದಲ್ಲಿ ಸಾಕಷ್ಟು ಸಕ್ಕರೆ ಇರುವಂತೆ ಮಾಡಲು ಕ್ರಮ ತೆಗೆದುಕೊಂಡಿದೆ.














