Sachin vs Kohli: ಸಚಿನ್‌ಗಿಂತ ಕೊಹ್ಲಿಯೇ ಬೆಸ್ಟ್ ಎಂದ ದಕ್ಷಿಣ ಆಫ್ರಿಕಾ ಲೆಜೆಂಡ್! ಆದರೆ ದಾಖಲೆಗಳ ಪುಟದಲ್ಲಿ ಯಾರ ಕೈ ಮೇಲಿದೆ? | ಕ್ರೀಡಾ ಸುದ್ದಿ | ACTPnews

ವಿರಾಟ್ ಕೊಹ್ಲಿ vs  ಸಚಿನ್ ತೆಂಡೂಲ್ಕರ್


Last Updated:

ಸಚಿನ್ vs ಕೊಹ್ಲಿ ಇಬ್ಬರಲ್ಲಿ ಯಾರು ಸರ್ವಶ್ರೇಷ್ಠ ಎಂಬ ಚರ್ಚೆ ಮಾತ್ರ ಎಂದಿಗೂ ಮುಗಿಯದ ಅದ್ಭುತ ಕಾವ್ಯದಂತಿದೆ. ಇದೀಗ ದಕ್ಷಿಣ ಆಫ್ರಿಕಾದ ಲೆಜೆಂಡರಿ ಬ್ಯಾಟರ್ ಎಬಿ ಡಿವಿಲಿಯರ್ಸ್​ ಮತ್ತೊಮ್ಮೆ ಈ ಇಬ್ಬರು ಲೆಜೆಂಡರಿ ಕ್ರಿಕೆಟಿಗರ ನಡುವೆ ಹೋಲಿಕೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ vs  ಸಚಿನ್ ತೆಂಡೂಲ್ಕರ್
ವಿರಾಟ್ ಕೊಹ್ಲಿ vs ಸಚಿನ್ ತೆಂಡೂಲ್ಕರ್

ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ (Sachin Tendulkar vs Virat Kohli) ನಡುವಿನ ಹೋಲಿಕೆಯು ಕೇವಲ ಇಬ್ಬರು ಶ್ರೇಷ್ಠ ಆಟಗಾರರ ನಡುವಿನ ಸ್ಪರ್ಧೆಯಲ್ಲ. ಅದು ಕ್ರಿಕೆಟ್‌ನ ಎರಡು ವಿಭಿನ್ನ ಸುವರ್ಣ ಯುಗಗಳ ನಡುವಿನ ರೋಮಾಂಚಕ ಸಂವಾದ. ಒಬ್ಬರು ಬ್ಯಾಟಿಂಗ್ ಅನ್ನೇ ಒಂದು ಧರ್ಮವನ್ನಾಗಿಸಿ ಭಾರತೀಯ ಕ್ರಿಕೆಟ್‌ಗೆ ಭದ್ರ ಬುನಾದಿ ಹಾಕಿಕೊಟ್ಟು ‘ಕ್ರಿಕೆಟ್ ದೇವರು’ (God of Cricket) ಎಂದೇ ಖ್ಯಾತರಾದವರು, ಮತ್ತೊಬ್ಬರು ಆ ಬುನಾದಿಯ ಮೇಲೆ ಆಧುನಿಕ ಕ್ರಿಕೆಟ್‌ನ ಸಾಮ್ರಾಜ್ಯವನ್ನು ಕಟ್ಟಿ ಕಠಿಣ ಫಿಟ್‌ನೆಸ್ ಹಾಗೂ ಅಗ್ರೆಸ್ಸಿವ್ ಶೈಲಿಯಿಂದ ಜಾಗತಿಕ ಕ್ರಿಕೆಟ್ ಅನ್ನು ಆಳಿದ ‘ರನ್‌ ಮಷೀನ್’ (King Kohli). ತಲೆಮಾರುಗಳು, ಬೌಲಿಂಗ್ ಗುಣಮಟ್ಟ ಮತ್ತು ಕ್ರಿಕೆಟ್‌ನ ನಿಯಮಗಳು ಬದಲಾಗಿದ್ದರೂ, ಇವರಿಬ್ಬರಲ್ಲಿ ಯಾರು ಸರ್ವಶ್ರೇಷ್ಠ ಎಂಬ ಚರ್ಚೆ ಮಾತ್ರ ಎಂದಿಗೂ ಮುಗಿಯದ ಅದ್ಭುತ ಕಾವ್ಯದಂತಿದೆ. ಇದೀಗ ದಕ್ಷಿಣ ಆಫ್ರಿಕಾದ ಲೆಜೆಂಡರಿ ಬ್ಯಾಟರ್ ಎಬಿ ಡಿವಿಲಿಯರ್ಸ್ ಮತ್ತೊಮ್ಮೆ ಈ ಇಬ್ಬರು ಲೆಜೆಂಡರಿ ಕ್ರಿಕೆಟಿಗರ ನಡುವೆ ಹೋಲಿಕೆ ಮಾಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed