Last Updated:
Shah Rukh Khan: ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಮನೆಯಲ್ಲಿ 8 ಅಡಿ ಉದ್ದದ ಹಾವು ಪತ್ತೆಯಾಗಿದೆ. ರಾತ್ರೋ ರಾತ್ರಿ ಹಾವು ಹಿಡಿಯುವವರನ್ನು ಮನೆಗೆ ಕರೆಸಲಾಗಿದೆ.
ಬಾಲಿವುಡ್ (Bollywood) ನಟ ಶಾರುಖ್ ಖಾನ್ (Shah Rukh Khan) ಅವರ ಮುಂಬೈ ನಿವಾಸ (Mumbai Home) ಮನ್ನತ್ನಲ್ಲಿ (Mannat) ಆಗಸ್ಟ್ 17 ರಂದು ಹಾವು ಕಾಣಿಸಿಕೊಂಡ ನಂತರ ಘಟನೆ ವರದಿಯಾಗಿದೆ. ಪೊಲೀಸ್ (Police) ಮೂಲದ ಪ್ರಕಾರ, ಆ ದಿನ ಬಾಂದ್ರಾ ವೆಸ್ಟ್ (Bandra West) ನಲ್ಲಿರುವ ನಟನ ನಿವಾಸದಲ್ಲಿ ಹಾವು ಇರುವ ಬಗ್ಗೆ ಕರೆ ಬಂದಿತು, ನಂತರ ಹಾವು ರಕ್ಷಕ ವಿಕ್ಕಿ ದುಬೆ ಅವರನ್ನು ಸ್ಥಳಕ್ಕೆ ಕರೆಸಲಾಯಿತು.














