Last Updated:
ಟಾಕ್ಸಿಕ್ ಚಿತ್ರದ ಪ್ರಮೋಷ್ ಎಲ್ಲೆಡೆ ಆಗುತ್ತಿದೆ. ಬೆಂಗಳೂರಿನ ಮೆಟ್ರೋ ರೈಲಷ್ಟೇ ಅಲ್ಲ, ಕೊಲ್ಕತ್ತಾದ ಮೆಟ್ರೋ ರೈಲಿನ ಮೇಲು ರಾಕಿ ಭಾಯ್ ರಾರಾಜಿಸುತ್ತಿದ್ದಾರೆ. ಈ ಕುರಿತ ಇನ್ನಷ್ಟು ವಿವರ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಪ್ರಚಾರ ಬೆಂಗಳೂರಿನಲ್ಲಿ ಜೋರಾಗಿಯೇ ಆಗುತ್ತಿದೆ. ಎರಡು ಮೆಟ್ರೋ ರೈಲಿನ (Metro Train) ಮೇಲೆ ಚಿತ್ರದ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಈ ಮೂಲಕ ಮೆಟ್ರೋ ಪ್ರಯಾಣಿಕರಿಗೆ ಟಾಕ್ಸಿಕ್ ಚಿತ್ರ (Toxic Movie) ಬರ್ತಿದೆ ಅನ್ನುವ ಐಡಿಯಾ ಬಂದಿರುತ್ತದೆ. ಆದರೆ, ಎಲ್ಲೆಡೆ ಇದೇ ರೀತಿನೇ ಪ್ರಮೋಷನ್ (Promotion) ಆಗ್ತಿದಿಯಾ? ಈ ಪ್ರಶ್ನೆಗೆ ಉತ್ತರ ರೂಪದಲ್ಲಿ ಒಂದಷ್ಟು ಮಾಹಿತಿ ಬಂದಿದೆ. ಅದರ ವಿವರ ಮುಂದೆ ಇದೆ ಓದಿ.














