Last Updated:
ಬಾಲಿವುಡ್ ತಾರೆ ಶಾರುಖ್ ಖಾನ್ ಒಡೆತನದ ನೈಟ್ ರೈಡರ್ಸ್ ಗುಂಪು ಮತ್ತೊಂದು ಕ್ರಿಕೆಟ್ ಲೀಗ್ಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.
ಬಾಲಿವುಡ್ ತಾರೆ ಶಾರುಖ್ ಖಾನ್ (Sharuk Khan) ಒಡೆತನದ ನೈಟ್ ರೈಡರ್ಸ್ (Knight Riders) ಫ್ರಾಂಚೈಸಿ ಮತ್ತೊಂದು ಕ್ರಿಕೆಟ್ ಲೀಗ್ಗೆ ಪ್ರವೇಶಿಸಲು ಸಜ್ಜಾಗಿದೆ ಎಂಬ ವರದಿಗಳಾಗಿವೆ. ಇಂಗ್ಲೆಂಡ್ನ ‘ದಿ ಹಂಡ್ರೆಡ್’ ಪಂದ್ಯಾವಳಿಗೆ ಹೊಸ ತಂಡಗಳನ್ನು ಸೇರಿಸಲು ಕ್ರಿಕೆಟ್ ಮಂಡಳಿ ಬಯಸಿದರೆ, ನೈಟ್ ರೈಡರ್ಸ್ ಗ್ರೂಪ್ ಫ್ರಾಂಚೈಸಿಗಳಲ್ಲಿ ಒಂದನ್ನು ಸ್ವಾಧೀನಪಡಿಸಿಕೊಳ್ಳಲು ಆಸಕ್ತಿ ಹೊಂದಿದೆ ಎಂದು ವರದಿಗಳು ಸೂಚಿಸುತ್ತವೆ.














