Last Updated:
ವಂತಾರಾದ ಜಾಮ್ನಗರ ಸೌಲಭ್ಯದಿಂದ ವರ್ಗಾಯಿಸಲಾದ ಈ ಗುಂಪಿನಲ್ಲಿ 5 ಗಂಡು ಮತ್ತು 15 ಹೆಣ್ಣು ಕೃಷ್ಣಮೃಗಗಳಿದ್ದವು. ಕೇಂದ್ರೀಯ ಪ್ರಾಣಿಸಂಗ್ರಹಾಲಯ ಪ್ರಾಧಿಕಾರ (ಸಿಝೆಎ) ಮತ್ತು ಗುಜರಾತ್ನ ಮುಖ್ಯ ವನ್ಯಜೀವಿ ರಕ್ಷಣಾಧಿಕಾರಿಯವರ ಅನುಮೋದನೆಯ ನಂತರ ಇವುಗಳನ್ನು ಸ್ಥಳಾಂತರಿಸಲಾಯಿತು.
ಅಹಮದಾಬಾದ್(ಆ.16): ಆಗಸ್ಟ್ 15ರಂದು ಭಾರತದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಗುಜರಾತ್ ಅರಣ್ಯ ಇಲಾಖೆ ಮತ್ತು ಗ್ರೀನ್ಸ್ ಝೂಲಾಜಿಕಲ್ ರೆಸ್ಕ್ಯೂ ಅಂಡ್ ರಿಹ್ಯಾಬಿಲಿಟೇಷನ್ ಸೆಂಟರ್ (ಜಿಝೆಡ್ಆರ್ಆರ್ಸಿ) – ವಂತಾರಾ ಸಂಸ್ಥೆ ಸೇರಿ ಕಚ್ನ ಬನ್ನಿ ಹುಲ್ಲುಗಾವಲುಗಳಲ್ಲಿ 20 ಕೃಷ್ಣಮೃಗಗಳನ್ನು (ಬ್ಲಾಕ್ಬಕ್, Antilope cervicapra) ಯಶಸ್ವಿಯಾಗಿ ಮರುಪರಿಚಯಿಸಿದವು.














