Last Updated:
ಗಂಟೆಗಟ್ಟಲೆ ಫೋನ್ ಬಳಸುವುದು, ವಿಶೇಷವಾಗಿ ತಪ್ಪು ರೀತಿಯಲ್ಲಿ ಕುಳಿತುಕೊಂಡು ಬಳಸುವುದು, ಆರೋಗ್ಯಕ್ಕೆ ಕೆಡುಕು ಮಾಡಬಹುದು. ಇತ್ತೀಚೆಗೆ ಇದರಿಂದ ನಟಿ ಶಕೀಲಾ ದೊಡ್ಡ ಪರಿಣಾಮವನ್ನು ಎದುರಿಸಬೇಕಾಯಿತು.
ನಟಿ ಮತ್ತು ಯೂಟ್ಯೂಬರ್ ಶಕೀಲಾ (Shakeela) ಇತ್ತೀಚೆಗೆ ತಮ್ಮ ಆರೋಗ್ಯ(Health)ದ ಬಗ್ಗೆ ಒಂದು ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ಗಂಟೆಗಟ್ಟಲೆ ಹೆಚ್ಚು ಮೊಬೈಲ್ (Mobile) ಬಳಸಿ, ಒಂದೇ ಭಂಗಿಯಲ್ಲಿ ಗೇಮ್ (Game) ಆಡುತ್ತಿದ್ದರಿಂದ ಕುತ್ತಿಗೆಗೆ ಗಂಭೀರ ಸಮಸ್ಯೆಯಾಗಿತ್ತು. ಇದಕ್ಕಾಗಿ ಅವರು ಇತ್ತೀಚೆಗೆ ಶಸ್ತ್ರಚಿಕಿತ್ಸೆ (Surgery) ಮಾಡಿಸಿಕೊಂಡರು. ಈ ಶಸ್ತ್ರಚಿಕಿತ್ಸೆಗೆ ಸುಮಾರು 3 ಲಕ್ಷ ರೂಪಾಯಿ ಖರ್ಚಾಯಿತು ಎಂದು ಅವರು ತಮ್ಮ ಯೂಟ್ಯೂಬ್ ವೀಡಿಯೋದಲ್ಲಿ ಇದನ್ನು ತಿಳಿಸಿದ್ದಾರೆ.














