Last Updated:
ಟಾಕ್ಸಿಕ್ ಚಿತ್ರದ ಮ್ಯೂಸಿಕ್ ಲಾಂಚ್ ಅದ್ದೂರಿ ಆಗಿಯೇ ನಡೆದಿದೆ. ಕಲರ್ಫುಲ್ ಲೋಕದಲ್ಲಿ ಗಾಯಕರು ಹೊಸ ಅಲೆಯನ್ನೆ ಎಬ್ಬಿಸಿದ್ದಾರೆ. ಈ ಒಂದು ಅದ್ಭುತ ಸಂಭ್ರಮದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಮ್ಯೂಸಿಕ್ ಯುನಿಕ್ ಆಗಿದೆ. ಅಂತಾರಾಷ್ಟ್ರೀಯ ಮಟ್ಟಕ್ಕೇನೆ ಇದೆ. ವಿಶಾಲ್ ಮಿಶ್ರಾ (Vishal Mishra) ಸಂಗೀತದ ತಬಾಹಿ ಹಾಡು ಹಲ್ಚಲ್ ಎಬ್ಬಿಸಿದೆ. ರವಿ ಬಸ್ರೂರು (Ravi Basrur) ಹಿನ್ನೆಲೆ ಸಂಗೀತದ ಮೋಡಿ ಬೇರೆ ಇದೆ. ಮ್ಯೂಸಿಕಲಿ ಹೊಸ ಅನುಭವ ಕೊಡುವ ಈ ಚಿತ್ರದ ಮ್ಯೂಸಿಕ್ ಲಾಂಚ್ ಕಲರ್ಫುಲ್ ಆಗಿಯೇ ಆಗಿದೆ. ಇಡೀ ಸಿನಿಮಾದ ಎಲ್ಲ ಹಾಡುಗಳ ರಿಲೀಸ್ (Song Release) ಅನ್ನ ಅದ್ದೂರಿಯಾಗಿಯೇ ಮಾಡಲಾಗಿದೆ. ಈ ಒಂದು ಕಾರ್ಯಕ್ರಮದ ಸಡಗರ ಮತ್ತು ಸಂಭ್ರಮ ತುಂಬಾನೆ ಚೆನ್ನಾಗಿ ಆಗಿದೆ. ಇದರ ಒಟ್ಟು ಚಿತ್ರಣದ ಸ್ಟೋರಿ ಇಲ್ಲಿದೆ ಓದಿ.














