Last Updated:
ನಿಮ್ಮನ್ನು ಬೆಚ್ಚಿಬೀಳಿಸುವಂತಹ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 17 ವರ್ಷದ ಬಾಲಕನೊಬ್ಬ ಚಾಟ್ಜಿಪಿಟಿಯಿಂದ ಒಂದು ಐಡಿಯಾ ಪಡೆದು, ತನ್ನ ತಾಯಿ ಮತ್ತು ಸಹೋದರನನ್ನು ಕ್ರೂರವಾಗಿ ಕೊಂದು ನಂತರ ಕುಟುಂಬದ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.
ತಂತ್ರಜ್ಞಾನ (Technology) ನಮಗೆ ಎಷ್ಟು ಒಳ್ಳೆಯದನ್ನು ಕಲಿಸುತ್ತೋ, ಅದರ ದುರುಪಯೋಗ ಕೂಡ ನಮ್ಮನ್ನು ಅಷ್ಟೇ ಅಪರಾಧಿಗಳನ್ನಾಗಿ ಮಾಡಬಹುದು. ಅಮೆರಿಕದ (America) ಮ್ಯಾಸಚೂಸೆಟ್ಸ್ ರಾಜ್ಯದ ಆಕ್ಟನ್ ನಗರದಲ್ಲಿ ವಾಸಿಸುತ್ತಿದ್ದ 17 ವರ್ಷದ ಹುಡುಗನ ವಿಷಯದಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ. ಭಾರತೀಯ ಮೂಲದ ಈ ಹುಡುಗನ ಮೇಲೆ ತನ್ನ ತಾಯಿ ಮತ್ತು ಕಿರಿಯ ಸಹೋದರನ ಗಂಭೀರ ಕೊಲೆ ಆರೋಪವಿದೆ. ಅದುವೇ ಚಾಟ್ಜಿಪಿಟಿಯಿಂದ (ChatGPT) ಐಡಿಯಾ ಪಡೆದು ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.














