Puttakkana Makkalu Hero: ‘ಪುಟ್ಟಕ್ಕನ ಮಕ್ಕಳು’ ಕಂಠಿ ಈಗ ಹೀರೋ! ಈ ಸಿನಿಮಾದಲ್ಲಿ ಮಳೆಯೇ ಹೈಲೈಟ್ | | ACTPnews

ಪುಟ್ಟಕ್ಕನ ಮಕ್ಕಳು ಕಂಠಿ ಈಗ ಹೀರೋ!


Last Updated:

ಪುಟ್ಟಕ್ಕ ಮಕ್ಕಳು ಸೀರಿಯಲ್ ಖ್ಯಾತಿಯ ಕಂಠಿ ಸಿನಿಮಾ ಹೀರೋ ಆಗಿದ್ದಾರೆ. ಇನ್ನು ಹೆಸರಿಡದ ಈ ಚಿತ್ರಕ್ಕೆ ಮುಹೂರ್ತ ಕೂಡ ಆಗಿದೆ. ಚಿತ್ರದಲ್ಲಿ ಮಳೆ ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಇದು ಮುಂಗಾರು ಮಳೆ ರೀತಿ ಸಿನಿಮಾ ಅಲ್ಲ. ಇಲ್ಲಿ ಬೇರೆ ವಿಷಯ ಇದೆ. ಅದರ ವಿವರ ಮುಂದೆ ಇದೆ ಓದಿ.

ಪುಟ್ಟಕ್ಕನ ಮಕ್ಕಳು ಕಂಠಿ ಈಗ ಹೀರೋ!
ಪುಟ್ಟಕ್ಕನ ಮಕ್ಕಳು ಕಂಠಿ ಈಗ ಹೀರೋ!

ಹ್ಯಾಟ್ರಿಕ್ ಶಿವರಾಜ್ ಕುಮಾರ್ (Shiva Rajkumar) ಅವರು ಈ ಯವ ನಟನ ಪ್ರತಿಭೆಯನ್ನ ಮೆಚ್ಚಿಕೊಂಡಿದ್ದರು. ರಿಯಾಲಿಟಿ ಶೋದಲ್ಲಿ ಡ್ಯಾನ್ಸ್ ನೋಡಿ ಕಳೆದು ಹೋಗಿದ್ದರು. ಶಿವರಾಜ್ ಕುಮಾರ್ (Shiva Rajkumar) ಅವರ ಓಂ ಚಿತ್ರದ ಆ ಸಿಗರೇಟ್ ಹಚ್ಚುವ ಸೀನ್‌ ಅನ್ನ ವೇದಿಕೆ ಮೇಲೆ ರೀ-ಕ್ರಿಯೇಟ್ ಕೂಡ ಮಾಡಿದ್ದರು. ಇದನ್ನೆಲ್ಲ ನೋಡಿದ ಶಿವಣ್ಣ ಭೇಷ್ ಅಂತಲೇ ಹೇಳಿದ್ರು. ಹಾಗೆ ಶಿವಣ್ಣನಿಂದ ಮೆಚ್ಚುಗೆ ಪಡೆದುಕೊಂಡ ಆ ಯವ ನಟ ಇದೀಗ ಸಿನಿಮಾ ಹೀರೋ ಆಗಿದ್ದಾರೆ. ಇವರ ಮೊದಲ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ. ಆದರೆ ಸಿನಿಮಾ ಲಾಂಚ್ ಆಗಿದೆ. ಟಗರು ಪಲ್ಯ ಚಿತ್ರದ (Tagaru Palya) ಡೈರೆಕ್ಟರ್ ಈ ಸಿನಿಮಾ (Movie) ಮಾಡ್ತಿದ್ದಾರೆ. ಇವರಿಗೆ ಇದು ನಿರ್ದೇಶನದ 2ನೇ ಚಿತ್ರವೇ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಕಂಠಿ ಯಾರು ಗೊತ್ತಲ್ಲ..?

ಕಂಠಿ ಯಾರು ಅಂತ ಗೊತ್ತೇ ಇರುತ್ತದೆ. ಅಷ್ಟು ಫೇಮಸ್ ಆಗಿರೋದು ಸಿನಿಮಾದಿಂದ ಅಲ್ಲ. ಸೀರಿಯಲ್‌ ಅಲ್ಲಿ ನಟಿಸೋ ಮೂಲಕ ಈ ಕಂಠಿ ಎಲ್ಲರ ಗಮನಕ್ಕೂ ಬಂದಿದ್ದಾರೆ.

Puttakkana Makkalu Kanti Fame Dhanush First Movie Latest Updates

ಧನುಷ್ ಮೊದಲ ಸಿನಿಮಾ
ಅಂದ್ಹಾಗೆ ಇವರ ಸೀರಿಯಲ್ ಹೆಸರು ಪುಟ್ಟಕ್ಕನ ಮಕ್ಕಳುನೇ ಆಗಿದೆ. ಈ ಸೀರಿಯಲ್ ಅಲ್ಲಿ ಕಂಠಿ ಅನ್ನುವ ಪಾತ್ರವನ್ನ ಮಾಡಿದ್ದರು. ಇವರ ಅಸಲಿ ನೇಮ್ ಬೇರೆ ಇದೆ. ಅದು ಧನುಷ ಅನ್ನೋದು ಬಹುತೇಕರಿಗೆ ಗೊತ್ತೇ ಇಲ್ಲ. ಕಂಠಿ ಅನ್ನೋದು ಅಚ್ಚೊತ್ತಿದೆ.
ಧನುಷ್ ಮೊದಲ ಸಿನಿಮಾ

ಧನುಷ್ ಲುಕ್ ಚೆನ್ನಾಗಿದೆ. ಕಂಠಿ ಅನ್ನುವ ಪಾತ್ರಕ್ಕೆ ಸೂಕ್ತವಾಗಿಯೇ ಇತ್ತು. ಆದರೆ, ಇದೀಗ ಸೀರಿಯಲ್ ನಿಂದ ಈ ಧನುಷ್ ಸಿನಿಮಾಗೆ ಕಾಲಿಟ್ಟಿದ್ದಾರೆ.

ಟಗರು ಪಲ್ಯ ಚಿತ್ರದ ಡೈರೆಕ್ಟರ್ ಉಮೇಶ್ ಕೆ ಕೃಪ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಈ ಮೂಲಕ ಧನುಷ್ ಮೊದಲ ಚಿತ್ರದ ಡೈರೆಕ್ಟರ್ ಆಗಿದ್ದಾರೆ.

ಧನುಷ್ ಸಿನಿಮಾ ಲಾಂಚ್

ಧನುಷ್ ಅಭಿನಯದ ಈ ಚಿತ್ರಕ್ಕೆ ಮುಹೂರ್ತ ಆಗಿದೆ. ಬೆಂಗಳೂರಿನ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಚಿತ್ರದ ಪೂಜೆ ಆಗಿದೆ. ಈ ಚಿತ್ರದಲ್ಲಿ ನವ ನಟಿ ಮನಸ್ವಿ ಈ ಚಿತ್ರದ ನಾಯಕಿ ಆಗಿದ್ದಾರೆ.

ಮನಸ್ವಿ ಈಗಾಗಲೆ ಕೆಲವು ಚಿತ್ರದಲ್ಲಿ ನಟಿಸಿದ್ದಾರೆ. ಸೀರಿಯಲ್ ಕೂಡ ಮಾಡಿದ್ದಾರೆ. ಆದರೆ, ಈ ಚಿತ್ರದಲ್ಲಿ ನಟ ಧನುಷ್‌ಗೆ ಜೋಡಿ ಆಗಿದ್ದಾರೆ.

Puttakkana Makkalu Kanti Fame Dhanush First Movie Latest Updates

ಚಿತ್ರದ ಲಾಂಚ್; ಮಳೇನೆ ಹೈಲೈಟ್
ಇದು ಎಂತಹ ಕಥೆ ಸಿನಿಮಾ

ಧನುಷ್ ಹಾಗೂ ಮನಸ್ವಿ ಅಭಿನಯದ ಈ ಚಿತ್ರದಲ್ಲಿ ಎಂತಹ ಕಥೆ ಇದೆ. ಈ ಪ್ರಶ್ನೆಗೆ ಉತ್ತರವನ್ನು ಚಿತ್ರ ತಂಡ ಕೊಟ್ಟಿದೆ. ಸಿನಿಮಾದಲ್ಲಿ ಎಮೋಷನ್ಸ್ ಇದೆ. ಕಾಮಿಡಿ ಮತ್ತು ಪ್ರೀತಿನೂ ಇದೆ.

ಇದಕ್ಕೂ ಹೆಚ್ಚಾಗಿ ಇದು ಒಂದು ನಾಡಿನ ಕಥೆಯ ಚಿತ್ರ ಆಗಿದೆ. ಟಗರು ಪಲ್ಯ ಆದ್ಮೇಲೆ ಡೈರೆಕ್ಟರ್ ಉಮೇಶ್ ಕೆ ಕೃಪ ಈ ಚಿತ್ರ ಮಾಡುತ್ತಿದ್ದಾರೆ. ಇದರ ಚಿತ್ರೀಕರಣದ ಮಾಹಿತಿಯನ್ನೂ ಮುಹೂರ್ತದ ದಿನವೇ ಹಂಚಿಕೊಂಡಿದ್ದಾರೆ.

ಮಳೆ ಈ ಚಿತ್ರ ಹೈಲೈಟ್

ಧನುಷ್ ಮತ್ತು ಮನಸ್ವಿ ಅವರ ಈ ಚಿತ್ರಕ್ಕೆ ಮಳೆ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಅಂದ್ರೆ ಇಡೀ ಕಥೆಗೆ ಮಳೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಚಿತ್ರವನ್ನ ಮಳೆಗಾಲದಲ್ಲಿಯೇ ಚಿತ್ರೀಕರಣ ಮಾಡುವ ಪ್ಲಾನ್ ಕೂಡ ಇದೆ.

ಇದೀಗ ಮಳೆಗಾಲವು ಶುರು ಆಗಿದೆ. ಮುಂದಿನ ವಾರದಿಂದಲೇ ಚಿತ್ರೀಕರಣ ಶುರು ಆಗುತ್ತಿದೆ. ಆಗುಂಬೆ, ಚಿಕ್ಕಮಗಳೂರು, ಕಾರ್ಕಳ ಕಡೆಗಳಲ್ಲಿ ಈ ಸಿನಿಮಾದ ಶೂಟಿಂಗ್ ಪ್ಲಾನ್ ಆಗಿದೆ.

ಮೊದಲ ಹಂತದ ಶೂಟಿಂಗ್ ಅನ್ನ ಇಲ್ಲಿ ಮಾಡೋಕೆ ಚಿತ್ರ ತಂಡ ಪಕ್ಕಾ ರೆಡಿ ಆಗುತ್ತಿದೆ. ಪಳನಿ ಡಿ ಸೇನಾಪತಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಎಸ್ ಕೆ ರಾವ್ ಛಾಯಾಗ್ರಹಣ ಮಾಡುತ್ತಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed