Last Updated:
ಶೂಟಿಂಗ್ ಸಂದರ್ಭದಲ್ಲಿ ನಟಿಯ ಮೂಗುತಿ ಜಾರಿ ಬಾಯಿಗೆ ಬಿದ್ದಿದ್ದು, ಅದನ್ನು ನುಂಗಿದಂತಾಗಿ ನಟಿ ತಕ್ಷಣವೇ ಕೆಮ್ಮಲು ಆರಂಭಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಸ್ವತಃ ಶೆಹ್ನಾಜ್ ಗಿಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ಹಾಗೂ ಕಿರುತೆರೆಯಲ್ಲಿ ಜನಪ್ರಿಯರಾಗಿರುವ ನಟಿ ಶೆಹ್ನಾಜ್ ಗಿಲ್ (Shehnaaz Gill) ಅವರಿಗೆ ಶೂಟಿಂಗ್ ವೇಳೆ ಅನಿರೀಕ್ಷಿತ ಘಟನೆಯೊಂದು ಎದುರಾಗಿದೆ. ಚಿತ್ರೀಕರಣದ ಸಂದರ್ಭದಲ್ಲಿ ಅವರ ಮೂಗುತಿ ಜಾರಿ ಬಾಯಿಗೆ ಬಿದ್ದಿದ್ದು, ಅದನ್ನು ನುಂಗಿದಂತಾಗಿ ತಕ್ಷಣವೇ ಕೆಮ್ಮಲು ಆರಂಭಿಸಿದ್ದಾರೆ. ಈ ವೇಳೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಘಟನೆಯ ವಿಡಿಯೋವನ್ನು ಸ್ವತಃ ಶೆಹ್ನಾಜ್ ಗಿಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಅದು ವೈರಲ್ ಆಗಿದೆ.














