Last Updated:
ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲುಗಳು, ರಸ್ತೆ ಬದಿ ಬಿದ್ದಿರುವ ಕೆಸರು ಮತ್ತು ಚಪ್ಪಳಿ ಎಸೆದಿದ್ದಾರೆ. ಅಲ್ಲದೇ ‘ಕಳ್ಳ’ (ಚೋರ್) ಎಂಬ ಘೋಷಣೆಗಳನ್ನು ಸಹ ಕೂಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ (West Bengal) ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ಮಾಜಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಒಂದರ ಮೇಲೆ ಒಂದರಂತೆ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ಅವರ ಕಾರಿನ (Car) ಮೇಲೆ ಕಲ್ಲು ತೂರಾಟ (Stone-pelting) ನಡೆಸಿದ್ದಾರೆ. ಕಾರಿನ ಮೇಲೆ ಮಣ್ಣು, ಚಪ್ಪಲಿ ಎಸೆದು ಮಾಜಿ ಸಿಎಂ ವಿರುದ್ಧ ಘೋಷಣೆ ಕೂಗಿದ್ದಾರೆ. ಆದ್ರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಮತಾ ಬ್ಯಾನರ್ಜಿ ಈ ರೀತಿಯ ಕೃತ್ಯವನ್ನು ಸ್ಥಳೀಯರು ಮಾಡಿಲ್ಲ, ಬದಲಾಗಿ ಬಿಜೆಪಿ ಗೂಂಡಾಗಳೇ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.














