Last Updated:
ಬೆಂಗಳೂರಿನ 33 ವರ್ಷದ ಜಾನ್ಸಿ ಬಿ.ವಿ. ಆಟೋ ಓಡಿಸಿ ಸ್ವಾವಲಂಬಿಯಾಗುವುದರ ಜೊತೆಗೆ 50ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಆಟೋ ಡ್ರೈವಿಂಗ್ ಕಲಿಸಿದ್ದಾರೆ. ಅವರ ಸ್ಫೂರ್ತಿದಾಯಕ ಬದುಕಿನ ಕಥೆ ಇಲ್ಲಿದೆ.
ಬೆಂಗಳೂರಿನ ಟ್ರಾಫಿಕ್ನಲ್ಲಿ ಆಟೋ (Auto) ಓಡಿಸುವುದು ಸುಲಭದ ಮಾತಲ್ಲ. ಅದರಲ್ಲೂ ಮಹಿಳೆಯೊಬ್ಬರು ಆಟೋ ಓಡಿಸುತ್ತಾ, ತಮ್ಮ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಇತರರಿಗೂ ದಾರಿದೀಪವಾಗುವುದು ನಿಜಕ್ಕೂ ಸಾಧನೆಯೇ ಸರಿ. ಅಂತಹದ್ದೊಂದು ಸಾಧನೆ ಮಾಡಿದ್ದಾರೆ 33 ವರ್ಷದ ಜಾನ್ಸಿ ಬಿ.ವಿ. ಕೇವಲ ತಾವು ಸ್ವಾವಲಂಬಿಯಾಗಿದ್ದಲ್ಲದೆ, 50ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತವಾಗಿ ಆಟೋ ಡ್ರೈವಿಂಗ್ (Driving) ಕಲಿಸಿ, ಅವರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿ ಮಾಡಿದ್ದಾರೆ.














