Last Updated:
ಸಾರ್ಥಕ್ ರಂಜನ್ ಬಿಹಾರದ ಪೂರ್ಣಿಯ ಲೋಕಸಭಾ ಸಂಸದ ಪಪ್ಪು ಯಾದವ್ ಅವರ ಮಗ. ಸಾರ್ಥಕ್ ಅವರ ತಾಯಿ ರಂಜೀತ್ ರಂಜನ್ ಕೂಡ ರಾಜ್ಯಸಭಾ ಸಂಸದರಾಗಿದ್ದಾರೆ. ಸಾರ್ಥಕ್ ಬ್ಯಾಕ್ ಟು ಬ್ಯಾಕ್ ಅರ್ಧಶಕತಗಳೊಂದಿಗೆ ಅಬ್ಬರಿಸುವ ಮೂಲಕ ಲೀಗ್ನಲ್ಲೇ 2ನೇ ಟಾಪ್ ಸ್ಕೋರರ್ ಆಗಿದ್ದು, ಇಂಟರ್ನೆಟ್ ಸೆನ್ಷೇನ್ ಆಗಿದ್ದಾರೆ.
ಡೆಲ್ಲಿ ಪ್ರೀಮಿಯರ್ ಲೀಗ್ (DPL) 2026 ರಲ್ಲಿ, ನಾರ್ತ್ ಡೆಲ್ಲಿ ಸ್ಟ್ರೈಕರ್ಸ್ ತಂಡ ಈಸ್ಟ್ ಡೆಲ್ಲಿ ರೈಡರ್ಸ್ ತಂಡವನ್ನು 6 ವಿಕೆಟ್ಗಳಿಂದ ಸೋಲಿಸುವ ಮೂಲಕ ಅದ್ಭುತ ಪ್ರದರ್ಶನ ನೀಡಿತು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ (ಆಗಸ್ಟ್ 5) ನಡೆದ ಪಂದ್ಯದಲ್ಲಿ ನಾಯಕ ಸಾರ್ಥಕ್ ರಂಜನ್ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದರು. ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಸಾರ್ಥಕ್ ರಂಜನ್ ಕೇವಲ 50 ಎಸೆತಗಳಲ್ಲಿ 8 ಸಿಕ್ಸರ್ ಮತ್ತು 7 ಬೌಂಡರಿಗಳನ್ನು ಒಳಗೊಂಡ 95 ರನ್ ಗಳಿಸಿದರು. ಶತಕಕ್ಕೆ ಕೇವಲ 5 ರನ್ ಇದ್ದಾಗ ಔಟಾಗಿ ಶತಕ ಮಿಸ್ ಮಾಡಿಕೊಂಡರು. ಆದರೂ ಅವರ ಸ್ಫೋಟಕ ಬ್ಯಾಟಿಂಗ್ ಪಂದ್ಯದ ದಿಕ್ಕನ್ನು ಸಂಪೂರ್ಣವಾಗಿ ಬದಲಾಯಿಸಿತು.














