Darshan: ‘ದರ್ಶನ್ ಕೇಸ್ ಸತ್ಯಾಂಶ ಗೊತ್ತಾದ್ರೆ ಪೊಲೀಸ್ರೇ ಆರೋಪಿಗಳಾಗ್ತಾರೆ!’ ಸ್ನೇಹಮಯಿ ಕೃಷ್ಣ ಶಾಕಿಂಗ್​ ಸ್ಟೇಟ್‌ಮೆಂಟ್! | | ACTPnews

ಸ್ನೇಹಮಯಿ ಕೃಷ್ಣ - ದರ್ಶನ್​


Last Updated:

ಮಾಫಿ ಸಾಕ್ಷಿಯಿಂದ ದರ್ಶನ್​ ಅವರಿಗೆ ತೊಂದರೆ ಆಗುವುದಿಲ್ಲ ಅನುಕೂಲವಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಹೇಳಿದ್ದಾರೆ.

ಸ್ನೇಹಮಯಿ ಕೃಷ್ಣ - ದರ್ಶನ್​
ಸ್ನೇಹಮಯಿ ಕೃಷ್ಣ – ದರ್ಶನ್​

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್‌ರ (Darshan) ಕಷ್ಟದ ದಿನಗಳು ಅದ್ಯಾವಾಗ ಮುಗಿಯುತ್ತವೋ ದೇವ್ರೇ ಬಲ್ಲ. ಯಾಕಂದ್ರೆ ಕೊಲೆ ಕೇಸ್‌ನಲ್ಲಿ ಜೈಲು ಸೇರಿರೋ ದರ್ಶನ್‌, ತೆರೆ ಮೇಲೆ ಆರಡಿ ಐರಾವತನಂತೆ ಮಿಂಚ್ತಿದ್ದವ್ರು, ಜೈಲು (Jail) ಸೇರಿದ್ಮೇಲೆ ಕುಗ್ಗಿ ಹೋಗಿದ್ದಾರೆ. ದರ್ಶನ್​ ಪಾಲಿಗೆ ಬದುಕಿದ್ದಾಗಲೇ ಅಕ್ಷರಶಃ ನರಕ ದರ್ಶನವಾಗ್ತಿದೆ. ಪರಿಸ್ಥಿತಿ ಹೀಗಿರುವಾಗಲೇ ದರ್ಶನ್​ಗೆ ಮತ್ತೊಂದು ಶಾಕ್​ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿ ಪ್ರದೋಶ್‌ (Pradosh) ಮಾಫಿ ಸಾಕ್ಷಿ ಆಗಲು ಒಪ್ಪಿದ್ದಾರೆ. ಇದರಿಂದ ಆರೋಪಿ ದರ್ಶನ್​ಗೆ ತೊಂದರೆ ಆಗುತ್ತಿದೆ ಎಂಬ ಚರ್ಚೆ ಜೋರಾಗುತ್ತಿದೆ.

ದರ್ಶನ್​ಗೆ ಒಳ್ಳೆಯದೇ ಆಗುತ್ತದೆ

ಈ ವಿಚಾರವಾಗಿ ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಮಾಫಿ ಸಾಕ್ಷಿಯಿಂದ ದರ್ಶನ್​ ಅವರಿಗೆ ತೊಂದರೆ ಆಗುವುದಿಲ್ಲ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಪೊಲೀಸರ ರಕ್ಷಣೆಗಾಗಿ ಸತ್ಯಾಂಶ ಮುಚ್ಚಿಡಲಾಗುತ್ತಿದೆ

ರೇಣುಕಾಸ್ವಾಮಿಯ ಶವವನ್ನು ಕಾಮಾಕ್ಷಿಪಾಳ್ಯದ ಪೊಲೀಸ್‌ ಠಾಣೆಯ ವ್ಯಾಪ್ತಿಗೆ ತಂದು ಹಾಕಲು. ಬೇರೆಯವರನ್ನು ಆರೋಪಿಗಳನ್ನಾಗಿಸಿ, ಪ್ರಕರಣ ಮುಚ್ಚಿ ಹಾಕಲು ಇದೇ ಪ್ರದೋಶ್ ನೊಂದಿಗೆ ಶಾಮೀಲಾಗಿ ಸಂಚು ರೂಪಿಸಲಾಗಿತ್ತು. ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯ ಉಪ ನಿರೀಕ್ಷಕ ವಿನಯ್, ಇವರಿಗೆ ಸಹಕರಿಸಿದ್ದು ಪೊಲೀಸ್ ನಿರೀಕ್ಷಕ ಗಿರೀಶ್ ನಾಯಕ್, ಇದಕ್ಕಾಗಿ ಪ್ರದೋಶ್​ನಿಂದ ವಿನಯ್ ಲಕ್ಷಾಂತರ ರೂಪಾಯಿ ಪಡೆದುಕೊಂಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಉಪ ಪೊಲೀಸ್ ನಿರೀಕ್ಷಕ ತಲೆ ಮರೆಸಿ ಕೊಂಡಿದ್ದರು. ಇವರುಗಳನ್ನು ಪ್ರಕರಣದ ಆರೋಪಿಗಳನ್ನಾಗಿಸದೆ ಇವರುಗಳನ್ನು ರಕ್ಷಣೆ ಮಾಡುವ ಸಲುವಾಗಿ ಸತ್ಯಾಂಶಗಳನ್ನು ಮುಚ್ಚಿಡಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಬರೆದುಕೊಂಡಿದ್ದಾರೆ.
ಇಡೀ ಪ್ರಕರಣವೇ ಹೊಸ ತಿರುವು ಪಡೆದುಕೊಳ್ಳಲಿದೆ

ಅಷ್ಟೇ ಅಲ್ಲದೇ ಸುಳ್ಳು ದೋಷಾರೋಪಣ ಪತ್ರ ಸಲ್ಲಿಸಿದ್ದು ಸಹಾಯಕ ಪೊಲೀಸ್ ಆಯುಕ್ತ ಚಂದನ್ ಕುಮಾ‌ರ್, ಈ ಎಲ್ಲಾ ಸತ್ಯಗಳು ಪ್ರದೋಶ್‌ನ ಮಾಫಿ ಸಾಕ್ಷಿ ಮೂಲಕ ಮಾನ್ಯ ನ್ಯಾಯಾಲಯದಲ್ಲಿ ಹೊರಬಂದರೆ. ಇಡೀ ಪ್ರಕರಣವೇ ಹೊಸ ತಿರುವು ಪಡೆದುಕೊಳ್ಳಲಿದೆ. ಈ ಮೂರು ಜನ ಪೊಲೀಸ್ ಅಧಿಕಾರಿಗಳು ಆರೋಪಿಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸ್ನೇಹಮಯಿ ಕೃಷ್ಣ ಪೋಸ್ಟ್ ಮಾಡಿದ್ದಾರೆ.

(ವರದಿ: ಆನಂದ್​, ನ್ಯೂಸ್​18 ಕನ್ನಡ, ಮೈಸೂರು)
ಮಾಫಿ ಸಾಕ್ಷಿಗಳ ಆಟ, ದರ್ಶನ್​​ ಒಂಟಿಯಾದ್ರಾ?

ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ರೇಣುಕಾಸ್ವಾಮಿ ಪ್ರಕರಣದ ವಿಚಾರಣೆ ನಡೆದಿದ್ದು, ನಟ ದರ್ಶನ್ , ಪವಿತ್ರಾ ಗೌಡ ಹಾಗೂ ಕೆಲ ಆರೋಪಿಗಳು ಕೂಡ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆಗೆ ಹಾಜರಾಗಿದ್ರು. ಆರೋಪಿಗಳು ಮಾಫಿ ಸಾಕ್ಷಿಗಳಾಗುತ್ತಿರೋ ಸುದ್ದಿ ಕೇಳಿ ನಟ ದರ್ಶನ್​ ಬೇಸರಗೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed